Kannada NewsKarnataka NewsLatest

*ಕೊರೊನಾ ಆತಂಕದ ನಡುವೆ ರಾಜ್ಯದಲ್ಲಿ ಮೈ ಕೊರೆಯುವ ಚಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಮೈ ಕೊರೆಯುವ ಚಳಿ ಆರಂಭವಾಗಿದೆ.

ಕೋವಿಡ್ ನಿಂದಾಗಿ ರಾಜ್ಯದಲ್ಲಿ ಈವರೆಗೆ ನಾಲ್ವರು ಬಲಿಯಾಗಿದ್ದು, 78 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ರಾಜ್ಯದಲ್ಲಿ ಉಷ್ಣಾಂಶ ಕುಸಿದಿದ್ದು, ಭಾರಿ ಚಳಿ ಆರಂಭವಾಗಿದೆ. ಇದರಿಂದಾಗಿ ನೆಗಡಿ, ಕೆಮ್ಮು, ಜ್ವರದಂತಹ ಕಾಯಿಲೆಯಿಂದ ಹಲವರು ಬಳಲುತ್ತಿದ್ದಾರೆ.

ಉತ್ತರ ಒಳನಾಡಿನ ಹಲವೆಡೆ ವಿಪರೀತ ಚಳಿ ಆರಂಭವಾಗಿದೆ. ದಕ್ಷಿಣ ಒಳನಾಡಿನ ಹಲವೆಡೆ ಚಳಿ ಇದ್ದು, ಮೋಡ ಹಾಗೂ ಮಂಜು ಮುಸುಕಿದ ವಾತಾವರಣವಿದೆ. ಮಧ್ಯಾಹ್ನದ ನಂತರ ಅಲ್ಲಲ್ಲಿ ಬಿಸಿಲು ಕಾಣಿಸಿಕೊಳ್ಳುತ್ತಿದೆ.

ಇನ್ನು ಬೀದರ್ ನಲ್ಲಿ 10.4 ಡಿ.ಸೆ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ 13.8 ಡಿಗ್ರಿ, ವಿಜಯಪುರದಲ್ಲಿ 21.1 ಡಿಗ್ರಿ, ಧಾರವಾಡದಲ್ಲಿ 15 ಡಿಗ್ರಿ, ಬಾಗಲಕೋಟೆ 15.3 ಡಿಗ್ರಿ, ಗದಗದಲ್ಲಿ 15.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Home add -Advt


Related Articles

Back to top button