Kannada NewsKarnataka NewsLatestPolitics

ಕಸ್ತೂರಿ ರಂಗನ್ ವರದಿ ವಿರೋಧಿಸಿ ಅರಣ್ಯವಾಸಿಗಳ ಬೃಹತ್ ಜಾಥ

ಬೆಳಗಾಂವ ಅಧಿವೇಶನದಲ್ಲಿ ಸರಕಾರ ನಿಲುವು ಪ್ರಕಟ ನೀರಿಕ್ಷೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಡಿಸೆಂಬರ್ ೨ ರಂದು ಶಿರಸಿಯಲ್ಲಿ ಜರುಗಿದ, ಕಸ್ತೂರಿ ರಂಗನ್ ವರದಿ ವಿರೋಧ ಜಾಥದಲ್ಲಿ ಜಿಲ್ಲಾದ್ಯಂತ ಬೃಹತ್ ಸಂಖ್ಯೆಯಲ್ಲಿ, ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಅರಣ್ಯ ಅತಿಕ್ರಮಣದಾರರು ಭಾಗವಹಿಸುವುದರೊಂದಿಗೆ ಅರಣ್ಯವಾಸಿಗಳ ಒಗ್ಗಟ್ಟು ಪ್ರದರ್ಶಿಸಲಾಯಿತು. ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಪ್ರತಿಭಟನಾರ್ಥವಾಗಿ ಸಿಡಿದ್ದೆದ್ದು ಜಾಥದಲ್ಲಿ ಭಾಗವಹಿಸಿದ ಬೃಹತ್ ಅರಣ್ಯವಾಸಿಗಳ ಸಂಖ್ಯೆ ಗಮನಾರ್ಹ.

 ಜಿಲ್ಲೆಯ ವಿವಿಧ ಹೋರಾಟದ ಇತಿಹಾಸದಲ್ಲಿಯೇ, ಕಸ್ತೂರಿ ರಂಗನ್ ವರದಿ ವಿರೋಧ ಜಾಥ ದಾಖಲಾರ್ಹ. ನಿರಂತರ ೩೩ ವರ್ಷ ಅರಣ್ಯವಾಸಿಗಳ ಸಮಸ್ಯೆ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಕಿರುಕುಳ, ಹೋರಾಟದ ಮೆರವಣಿಗೆ, ರ‍್ಯಾಲಿ, ಪಾದಯಾತ್ರೆಗೆ ಸೀಮಿತವಾಗಿತ್ತು. ಅರಣ್ಯ ಅತಿಕ್ರಮಣದಾರರ ಹೋರಾಟ ಕಸ್ತೂರಿ ರಂಗನ್ ವರದಿ ಜ್ಯಾರಿಯಾದಲ್ಲಿ ಅರಣ್ಯವಾಸಿಗಳು ಅತಂತ್ರರಾಗುವರೆಂಬ ಭಾವನೆಯಿಂದ ಅಣ್ಯವಾಸಿಗಳು ಸಿಡಿದ್ದೆದ್ದು ಸಹಸ್ರಾರು ಸಂಖ್ಯೆಯಲ್ಲಿ ಜಾಥಕ್ಕೆ ಬಂದಿರುವುದು ವಿಶೇಷ.

 ಉತ್ತರ ಕನ್ನಡ ಜಿಲ್ಲೆಯ ೧೩೮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ೬೦೪ ಹಳ್ಳಿಗಳಲ್ಲಿನ ಪರಿಸರ ಸೂಕ್ಷö್ಮ ಪ್ರದೇಶಗಳ ಕುಟುಂಬಗಳಿAದ ಕಸ್ತೂರಿ ರಂಗನ್ ವರದಿ ತೀರಸ್ಕರಿಸಲು ಆಕ್ಷೇಪಣಾ ಪತ್ರ ಸಲ್ಲಿಸುವ ಕಾರ್ಯ ಹೋರಾಟಗಾರ ವೇದಿಕೆ ಕಾರ್ಯ ನಿರ್ವಹಿಸಿರುವುದು ಗಮನಾರ್ಹ ಅಂಶ.

 ಜಿಲ್ಲಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಅರಣ್ಯವಾಸಿಗಳು ಸರಕಾರದ ಪ್ರತಿನಿಧಿಯಾಗಿ ಆಗಮಿಸಿದ ಜನಪ್ರತಿನಿಧಿಗಳಿಗೆ ಗಮನ ಸೆಳೆಯುವಲ್ಲಿ ಜಾಥವು ಯಶಸ್ವಿಯಾಗಿದೆ. ಸೋಮವಾರದಿಂದ ಪ್ರಾರಂಭವಾಗಲಿರುವ ಬೆಳಗಾಂವ ಚಳಿಗಾಲದ ಅಧಿವೇಶನ ಸರಕಾರ ಚರ್ಚಿಸಿ ಪರಿಹಾರ ಸಿಗುವುದೆಂಬ ನಿರೀಕ್ಷೆಯಲ್ಲಿ ಅರಣ್ಯವಾಸಿಗಳು ಇದ್ದಾರೇ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಏಕವ್ಯಕ್ತಿ ಹೋರಾಟ:
 ಕಳೆದ ಎರಡು ದಶಕದಿಂದ ಅರಣ್ಯ ಸಮಸ್ಯೆಗಳಿಗೆ ಸ್ಫಂದಿಸಿ ರವೀಂದ್ರ ನಾಯ್ಕ ಸಂಘಟನೆಯ ಮೂಲಕ ಏಕವ್ಯಕ್ತಿಯಾಗಿ ಹೋರಾಟ ಮಾಡುತ್ತಿರುವುದು ಶ್ವಾಘನೀಯ. ಹೋರಾಟಕ್ಕೆ ಬೆಂಬಲವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಲ್ಲದೇ, ನಿರಂತರ ಹೋರಾಟಕ್ಕೆ ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಶೈಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button