Belagavi NewsBelgaum NewsKannada NewsKarnataka NewsLatest

*ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಕಟ್ಟೀಮನಿ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡಲಾದ ರಾಜ್ಯಮಟ್ಟದ ಕಟ್ಟೀಮನಿ ಕಾದಂಬರಿ ಪ್ರಶಸ್ತಿಯನ್ನು ಕನ್ನಡ ಹಿರಿಯ ಸಾಹಿತಿ, ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ  ಇಂದು ಬೆಳಗಾವಿಯ ಸರ್ಕಾರಿ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. 

ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾಕ್ಟರ್ ಯಲ್ಲಪ್ಪ ಹಿಮ್ಮಡಿ, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ,  ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ  ಡಾಕ್ಟರ್ ಕಿರಣ ಗಾಜನೂರ, ಬಸವರಾಜ ಕಟ್ಟೀಮನಿ ಅವರ ಮಗಳು ಮಂಜುಳಾ ಬಿರಾದಾರ ಸೇರಿದಂತೆ ಕಟ್ಟೀಮನಿ ಪ್ರತಿಷ್ಠಾನದ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು. 

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕನ್ನಡ ನಾಡು ನುಡಿಗಾಗಿ ಹೋರಾಟ ನಡೆಸಿ ಸಾಂಸ್ಕೃತಿಕ ಪ್ರಜ್ಞಯನ್ನು ಜಾಗೃತಿಗೊಳಿಸಿದ ಬರಹಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ತಲೆಮಾರಿಗೆ ರವಾನಿಸುವ ಕೆಲಸ ನಡೆಯಬೇಕು. ಕಾಲಕಾಲಕ್ಕೆ ಪ್ರಜ್ಞಾಶೀಲ ಬರಹಗಾರರು ಸಮಾಜಕ್ಕೆ ರಾಜಕೀಯ ವಲಯಕ್ಕೆ ಮಾರ್ಗದರ್ಶನ ನೀಡಿ ಸರಿ ದಾರಿಗೆ ಕರೆ ತರುವ ಪ್ರಯತ್ನ ಮಾಡುತ್ತ ಬಂದಿದ್ದಾರೆ. ಈ ಪರಂಪರೆ ಮುಂದುವರೆಯಬೇಕು ಎಂದು ಹೇಳಿದರು. 

ಬರಗೂರು ರಾಮಚಂದ್ರಪ್ಪ ಮಾತನಾಡಿ, ಪ್ರಗತಿಪರ ವಿಚಾರಧಾರೆಯ ಖ್ಯಾತ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿ ಪ್ರಶಸ್ತಿ  ನನಗೆ ದೊರತಿರುವುದು ಪ್ರಗತಿಪರ ವಿಚಾರಧಾರೆಗೆ ಲಭಿಸಿದಂತಾಗಿದೆ. ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಗತಿಶೀಲ ಪ್ರಶಸ್ತಿಗಳು ದೊರಕಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ನಿನ್ನೊಂದಿಗೆ ಇದ್ದರೂ ನಿನ್ನಂತೆ ನಾನಾಗಲಾರೆ ಎಂದು ಸ್ವಂತಿಕೆಯ  ಸೃಜನಶೀಲತೆ ಮೆರೆದ ಪಂಪ ನನಗೆ ಆದರ್ಶರಾಗುತ್ತಾರೆ ಎಂದು ಹೇಳಿದರು. 

Home add -Advt

Related Articles

Back to top button