ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ವಿಮ ಘಟ್ಟ ಪ್ರದೇಶದ ಭಾಗವಾಗಿರುವ ಭೀಮಗಡ ಸುರಕ್ಷಿತ ಅರಣ್ಯ ಪ್ರದೇಶದ ಅಮಟೆ ಗ್ರಾಮ ಪಂಚಾಯತ ವ್ಯಾಪ್ತಿಯ ಅಮಗಾವ ಗ್ರಾಮಕ್ಕೆ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಬುಧವಾರ ಭೇಟಿ ನೀಡಿದ್ದರು.
ಅಲ್ಲಿಯ ಮೂಲಭೂತ ಸೌಕರ್ಯಗಳಾದ ಶಾಲೆ, ಕುಡಿಯುವ ನೀರು, ರಸ್ತೆಗಳ ಸೌಲಭ್ಯಗಳ ಕುರಿತು ಗ್ರಾಮಸ್ಥರೊಂದಿಗೆ, ಗ್ರಾಮ ಪಂಚಾಯತ ಸದಸ್ಯರ ಜೊತೆ ಚರ್ಚಿಸಿದರು. ಅತೀವೃಷ್ಟಿಯಿಂದ ಹಾನಿಗೊಳಗಾದ ಶಾಲೆಗಳ ಪುನರ್ ನಿರ್ಮಾಣ ಕುರಿತು ಅಮಗಾಂವ ಗ್ರಾಮದಲ್ಲಿ ೨ ಶಾಲಾ ಕೊಠಡಿಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಕೊಳ್ಳಲು ಸೂಚಿಸಿದರು. ನಂತರ ಚಿಕಲೆ ಗ್ರಾಮದ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ ಭೇಟಿ ನೀಡಿ ಸರ್ಕಾರದಿಂದ ಶಾಲಾ ಕಟ್ಟಡ ತುರ್ತು ದುರಸ್ಥಿ ಕಾಮಗಾರಿಗಾಗಿ ಅನುದಾನ ಮಂಜೂರಾಗಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಲಕ್ಷ್ಮಣರಾವ ಜಾಂಜರೆ, ಮಾಜಿ ತಾಲೂಕ ಪಂಚಾಯತ ಸದಸ್ಯ ಚಿದಂಬರ ಗಾಂವಕರ್, ತಾಲೂಕ ಬಿಜೆಪಿ ಅಧ್ಯಕ್ಷ ಸಂಜಯ ಕುಬಲ, ಮಾಜಿ ಕಾರ್ಪೋರೇಟರ್ ದೀಪಕ ಜಮಖಂಡಿ, ಧನಶ್ರೀ ಸರ್ ದೇಸಾಯಿ ಜಾಂಬೋಟಿಕರ, ರಾಜು ಜಾಂಬೋಟಿಕರ, ಗುಂಡು ತೋಪಿನಕಟ್ಟಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ