Kannada NewsKarnataka NewsLatest

ಮಗುವಿನೊಂದಿಗೆ ತಾಯಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ಕುಪ್ಪಟಗಿರಿ ಗ್ರಾಮದ ಬಾವುರಾವ್ ಪಾಟೀಲರ ಸೊಸೆ ರೋಹಿಣಿ@ವೈಶಾಲಿ ಪಾಟೀಲ(೨೮) ತನ್ನ ಮಗಳು ಸಾಯಿಶ್ರೀ(ರೇಣುಕಾ)(೧ ವ.೧೦ ತಿಂ)ಜೊತೆ  ಮನೆಯಿಂದ ನಾಪತ್ತೆ ಆಗಿದ್ದಾರೆ.

ಗಂಡ ಅರ್ಜಂಟಾಗಿ ಪುಣೆಗೆ ಬರಲು ತಿಳಿಸಿದ್ದಾರೆಂದು ಅಜ್ಜಿಗೆ  ಹೇಳಿ,  ಮಗುವಿನೊಂದಿಗೆ   ಹೋದವಳು ಪುಣೆಗೂ ಹೋಗದೆ, ಕುಪ್ಪಟಗಿರಿಗೂ ಬಾರದೆ ಜನೇವರಿ ೫ ರಿಂದ ಕಾಣೆಯಾಗಿದ್ದಾಳೆ.

Home add -Advt

ಗುಂಡು ಮುಖ, ನೇರ ಮೂಗು, ದುಂಡನೆ ಮೈಕಟ್ಟು, ಗೋದಿ ಮೈಬಣ್ಣ, ನೀಳ ಕೂದಲು, ಹಣೆಯ ಮೇಲೆ ಹಚ್ಚಿ,೫’-೩” ಎತ್ತರ ಇರುವ ಇವಳು ಕಪ್ಪು ಬಣ್ಣದ ಚೂಡಿದಾರ, ನೀಲಿ ಬಣ್ಣದ ವೇಲ್ ಧರಿಸಿದ್ದಳು.  ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾಳೆ.

ಸುಳಿವು ತಿಳಿದು ಬಂದರೆ ಖಾನಾಪುರ ಪೋಲಿಸ್ ಠಾಣೆಗೆ ತಕ್ಷಣ ತಿಳಿಸಬೇಕೆಂದು ಪೊಲೀಸರು ಕೋರಿದ್ದಾರೆ.

Related Articles

Back to top button