Kannada NewsKarnataka News

ಮನೆ ಕಳೆದುಕೊಂಡವರಿಗೆ ಆದೇಶ ಪತ್ರ ವಿತರಿಸಿದ ಕವಟಗಿಮಠ

ಪ್ರಗತಿವಾಹಿನಿ ಸುದ್ದಿ, ಮಾಂಜರಿ – ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು  ಆಡಳಿತ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರಕಾರ ಎಲ್ಲ ಸೌಕರ್ಯಗಳನ್ನು ಒದಗಿಸಿದೆ ಎಂದು ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಮಾಂಜರಿ ಗ್ರಾಮದಲ್ಲಿ ಸಂಪೂರ್ಣವಾಗಿ ಮನೆ ಬಿದ್ದಿರುವ ಫಲಾನುಭವಿಗಳಿಗೆ ಸರಕಾರದಿಂದ ಮಂಜೂರಾದ ಆದೇಶದ ಪತ್ರಗಳನ್ನು  ವಿತರಿಸಿ ಅವರು ಮಾತನಾಡುತ್ತಿದ್ದರು. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ  ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ  5 ಲಕ್ಷ ರೂ.ಗಳನ್ನು ಮನೆ ಕಟ್ಟಿಕೊಳ್ಳಲು ಪರಿಹಾರ ಘೋಷಣೆ ಮಾಡಿ ಅದನ್ನು ತ್ವರಿತಗತಿಯಲ್ಲಿ ಜಾರಿಗೆ ತಂದಿದೆ ಎಂದು ಅವರು ಹೇಳಿದರು.
 ಈ ವೇಳೆ ಮಾಂಜರಿ ಗ್ರಾಪಂ ಅಧ್ಯಕ್ಷ ಮಾಯಾ ಭಿಲವಡೆ ಸದಸ್ಯರಾದ ಭವನ್ ಭಿಲವಡೆ, ಮಹೇಶ್   ದಾಭೋಳೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ  ಅಣ್ಣಾ ಸಾಹೇಬ ಯಾದವ್, ಸುನೀತಾ ಭೊಜಕರ, ಮಹಾದೇವಿ ವಗೆ, ಚಿದಾನಂದ ಕೋರೆ, ಸಹಕಾರಿ ಸಕ್ಕರೆ ಕಾರ್ಖಾನೆಯ   ನಿರ್ದೇಶಕ ಅಜಿತ ದೇಸಾಯಿ, ಚಿಕ್ಕೋಡಿ ತಹಶಿಲ್ದಾರರಾದ ಸಂತೋಷ ಬಿರಾದಾರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಸ್ ಪಾಟೀಲ ಹಾಜರಿದ್ದರು.
 ಸರ್ವೆ ವೇಳೆ ತಪ್ಪಾಗಿದ್ದರೆ  ಅದನ್ನು ಸರಕಾರ ಸರಿಪಡಿಸಲಿದೆ ಎಂದು ಕವಟಗಿಮಠ ಹೇಳಿದರು. ಈ ಹಿಂದಿನ ಯಾವುದೆ ಸರಕಾರವಾಗಲಿ ಅಥವಾ ಮುಖ್ಯಮಂತ್ರಿ ಗಳಾಗಲಿ ಈ ರೀತಿ ಪ್ರವಾಹದಲ್ಲಿ ಸಂತ್ರಸ್ಥರ ನೆರವಿಗೆ ನಿಂತಿಲ್ಲ. ಆದರೆ  ಯಡಿಯೂರಪ್ಪನವರು ಎಲ್ಲಾ ರೀತಿಯ ನೆರವು ನೀಡಿ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.
 ಪ್ರವಾಹ ಪೀಡಿತ ಜನರ ಆರೋಗ್ಯ ರಕ್ಷಣೆಗಾಗಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ ಪ್ರಭಾಕರ ಕೋರೆ ನೇತೃತ್ವದಲ್ಲಿ ಎಲ್ಲ ಗ್ರಾಮಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ
ಶಿಬಿರವನ್ನು ಆಯೋಜಿಸಿ ಜನರಿಗೆ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗುವುದೆಂದು ಮಹಾಂತೇಶ್ ಕವಟಿಗಿಮಠ ಹೇಳಿದರು.
ಈ ಹಕ್ಕು ಪತ್ರ ವಿತರಣಾ ಸಮಾರಂಭಕ್ಕೆ ಮಾಂಜರಿ ಗ್ರಾಮದ ಹಿರಿಯರಾದ ದಾದಾಸಾಹೇಬ ಭೋಜಕರ, ಸನತ್ ಕುಮಾರ್ ಪಾಟೀಲ್, ರಾಮಚಂದ್ರ ಭೋಸ್ಲೆ, ಶಶಿಕಾಂತ ಪಾಟೋಳೆ, ಪರಶುರಾಮ ಪವಾರ್, ಶೀತಲ್ ಯಾದವ್, ಅಮೋಲ್ ಜಾಧವ್, ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಮರ್ ಯಾದವ್, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ನಿರ್ದೇಶಕರಾದ ವಾಯ್ ಎಲ್ ಪಾಟೀಲ್, ಎಂ ಪಿ ಪಾಟೀಲ್ ಹಾಗೂ ಮಾಂಜರಿ ಮಾಜರಿವಾಡಿ ಗ್ರಾಮದ ನೂರಾರು ನೆರೆಪೀಡಿತ ಗ್ರಾಮಸ್ಥರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button