ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2023-24ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.
ಬೆಂಗಳೂರಿನ ಮಲ್ಲೇಶ್ವರಂ ಕೆಸಿಇ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು 2.6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.
ಮೇ 20ರಿಂದ 22ರವರೆಗೆ ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕೆಸಿಇಟಿ ಪರೀಕ್ಷೆ ನಡೆದಿತ್ತು.
ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಪ್ರಥಮ, ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ, ಎಸ್.ಸುಮೇಧ್ 4ನೇ ಸ್ಥಾನ, ಮಾಧವ ಸೂರ್ಯ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ನ್ಯಾಚುರೋಪತಿ ಹಾಗೂ ಯೋಗಾ ವಿಭಾಗದಲ್ಲಿ ಪ್ರತೀಕ್ಷಾ ಮೊದಲ ಸ್ಥಾನ- ಬೆಂಗಳೂರಿನ ಪದ್ಮನಾಭನಗರ ಕುಮಾರನ್ ಪಿಯು ಕಾಲೇಜು ವಿದ್ಯಾರ್ಥಿನಿ
ಕೃಷಿ ವಿಭಾಗದಲ್ಲಿ ಭೈರೇಶ್ ಎಸ್.ಹೆಚ್- ಮಂಗಳೂರಿನ ಎಕ್ಸ್ ಪರ್ಟ್ ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿ
ವೆಟನರಿ ಸೈನ್ಸ್ ವಿಭಾಗ ದಲ್ಲಿ ಮಾಳವಿಕ ಕಾಪೂರ್ ಮೊದಲ ರ್ಯಾಂಕ್ – ಚಾಮರಾಜಪೇಟೆಯ ಮಹೇಶ್ ಕಾಲೇಜು ವಿದ್ಯಾರ್ಥಿನಿ
ಬಿ ಫಾರ್ಮ್ ವಿಭಾಗದಲ್ಲಿ ಪ್ರತೀಕ್ಷಾ ಆರ್ ಮೊದಲ ರ್ಯಾಂಕ್ – ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್ ಕಾಂಪೋಸಿಟ್ ಪ್ರಿ-ಯುನಿವರ್ಸಿಟಿ ಕಾಲೇಜು
ಬೆಳಿಗ್ಗೆ 11 ಗಂಟೆ ಬಳಿಕ kea.jar.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿರಲಿದೆ.
ಇನ್ನು karresults.nic.in ನಲ್ಲಿಯೂ ಫಲಿತಾಂಶ ಲಭ್ಯವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ