Kannada NewsLatestNationalTravel

*ಈ ದಿನದಂದು ತೆರೆಯಲಿದೆ ಕೇದಾರನಾಥ ಹಾಗೂ ಬದರಿನಾಥ ದೇವಾಲಗಳ ಬಾಗಿಲು*

ಚಾರ್ ಧಾಮ್ ಯಾತ್ರೆಗೆ ನೋಂದಣಿ ಆರಂಭ

ಪ್ರಗತಿವಾಹಿನಿ ಸುದ್ದಿ: ಹಿಂದೂಗಳ ಪವಿತ್ರ ಯಾತ್ರಾಸ್ಥಳಗಳ ಕೇದಾರನಾಥ ಹಾಗೂ ಬದರಿನಾಥ ದೇವಾಲಗಳ ಬಾಗಿಲು ತೆರೆಯುವ ದಿನಾಂಕವನ್ನು ದೇವಾಲಯದ ಸಮಿತಿ ಘೋಷಣೆ ಮಾಡಿದೆ.

ಈಗಾಗಲೇ ಚಾರ್ ಧಾಮ್ ಯಾತ್ರೆಗೆ ನೋಮ್ದಣಿ ಆರಂಭವಾಗಿದೆ. ಏಪ್ರಿಲ್ 22ರಂದು ಕೇದಾರನಾಥ ದೇವಾಲಯದ ಬಾಗಿಲು ತೆರಲಿದ್ದು, ಏಪ್ರಿಲ್ 23ರಂದು ಬದರಿನಾಥ ದೇವಾಲಯದ ಬಾಗಿಲು ತೆರೆಯಲಿದೆ.

ಚಾರ್ ಧಾಮ್ ಯಾತ್ರೆಗೆ ಮಾರ್ಚ್ 6ರಿಂದ ಆನ್ ಲೈನ್ ನೋಂದಣಿ ಆರಂಭವಾಗಿದ್ದು, ಯಾತ್ರಿಕರು ಮೊಬೈಲ್ ಆಪ್ ಮೂಲಕವೂ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Home add -Advt

ಛೋಟಾ ಚಾರ್ ಧಾಮ್ ಯಾತ್ರೆ ಏಪ್ರಿಲ್ 17ರಿಂದ ಆರಂಭವಾಗಲಿದೆ. ಯಾತ್ರೆ ಆರಂಭವಾಗುವ ಎರಡುದಿನಗಳ ಮೊದಲು ಆಫ್ ಲೈನ್ ನೊಂದಣಿ ಕೂಡ ಇರಲಿದೆ. ಇದಕ್ಕಾಗಿ ಋಷಿಕೇಶ, ಹರಿದ್ವಾರ ಮತ್ತು ಡೆಹ್ರಾಡೂನ್ ನಲ್ಲಿ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ದೇವಾಲಯದ ಸಮಿತಿ ತಿಳಿಸಿದೆ. ಏಪ್ರಿಲ್ 19ರಂದು ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲು ತೆರೆಯುವುದರೊಂದಿಗೆ ತೀರ್ಥಯಾತ್ರೆ ಆರಂಭವಾಗಲಿದೆ.

Related Articles

Back to top button