Karnataka News
*ಆಯತಪ್ಪಿ ಕೆರೆಗೆ ಬಿದ್ದ ಮಕ್ಕಳು: ಇಬ್ಬರೂ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ದಿನಗಳಿಂದ ಸುರಿದ ನಿರಂತರ ಮಳೆಯಿಂದ ಅನಾಹುತಗಳು ಸಂಭವಿಸಿವೆ. ಮನೆಯಂಗಳದ ಬಳಿ ಇದ್ದ ಕೆರೆಯಿಂದ ನೀರು ತರಲೆಂದು ಹೋದ ಅಣ್ಣ-ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರು ಪಾಲಾಗಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ನಡೆದಿದೆ.
ಜಾನ್ ಸೀನ್ (13) ಹಾಗೂ ಮಹಾಲಕ್ಷ್ಮೀ ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ನಾಗಮ್ಮ ಎಂಬುವವರ ಮಕ್ಕಳು. ಸೋಮವಾರ ಸಂಜೆ 6 ಗಂಟೆ ವೇಳೆ ಈ ದುರಂತ ಸಂಭವಿಸಿದೆ.
ನೀರು ತರಲೆಂದು ಕೆರೆಗೆ ಹೋದವರು ಕೆರೆ ಬಳಿ ಆಟವಾಡುತ್ತಾ ಇದ್ದರು. ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕೆರೆ ದಂಡೆ ಮೇಲೆ ಮಕ್ಕಳ ಬಟ್ಟೆ, ಬಿಂದಿಗೆ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಕೆರೆಯಲ್ಲಿ ಮಕ್ಕಳಿಗಾಗಿ ಶೋಧ ನಡೆಸಲಾಗುತ್ತಿದೆ.




