Latest

ಚರ್ಚ್ ನಲ್ಲಿಯೇ ಮಹಿಳೆಯೊಂದಿಗೆ ಸೆಕ್ಸ್; ಸಿಕ್ಕಿಬಿದ್ದ ಫಾದರ್

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಕೇರಳದ ಫಾದರ್ ಒಬ್ಬರು ಚರ್ಚ್ ನಲ್ಲಿಯೇ ಮಹಿಳೆಯೊಂದಿಗೆ ಸೆಕ್ಸ್ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಇಡುಕ್ಕಿ ಜಿಲ್ಲೆಯ ಕ್ಯಾಥೋಲಿಕ್ ಚರ್ಚ್‌ ನಲ್ಲಿ ನಡೆದಿದೆ.

ಇಡುಕ್ಕಿ ಜಿಲ್ಲೆಯ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಜೇಮ್ಸ್ ಮಂಗಲಾಶೇರಿ ಎಂಬಾತ ಚರ್ಚನ್ನು ತನ್ನ ಕಾಮದಾಟಕ್ಕೆ ಬಳಿಸಿಕೊಂಡಿದ್ದು, ಈ ಕೃತ್ಯ ಮೊಬೈಲ್​​ ಕ್ಯಾಮರದಲ್ಲಿ​ ಸೆರೆಯಾಗಿದೆ.

ಕೊರೊನಾ ಲಾಕ್​ಡೌನ್​​ನಿಂದ ಯಾರೂ ಕೂಡ ಚರ್ಚ್​ ಗೆ ಬರುವುದಿಲ್ಲ ಎಂದು ಭಾವಿಸಿ ಮಹಿಳೆಯೊಂದಿಗೆ ಸೆಕ್ಸ್​ನಲ್ಲಿ ತೊಡಗಿದ್ದರು. ಆದರೆ, ಚರ್ಚ್ ಗೆ ಬಂದ್ ವ್ಯಕ್ತಿ ತನ್ನ ಮೊಬೈಲ್​​ನಲ್ಲಿ ಈ ವಿಡಿಯೋ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಫಾದರ್​​ನೊಂದಿಗೆ ಸರಸಕ್ಕಿಳಿದ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಸುಮಾರು ಎರಡು ತಿಂಗಳಿನಿಂದ ಇವರಿಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಚರ್ಚ್​ ಫಾದರ್​​ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫಾದರ್ ನನ್ನು ಚರ್ಚ್ ನಿಂದ ಅಮಾನತು ಮಾಡಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button