NationalPolitics

*ಕಾಂಗ್ರೆಸ್ ನಲ್ಲೂ ಕಾಸ್ಟಿಂಗ್ ಕೌಚ್ ರೀತಿ ದಂಧೆ ಆರೋಪ: ಪಕ್ಷದಿಂದ ‘ಕೈ’ ನಾಯಕಿ ಉಚ್ಛಾಟನೆ*

ಪ್ರಗತಿವಾಹಿನಿ ಸುದ್ದಿ: ಕೇರಳ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಸೆಕ್ಸ್ ಹಗರಣ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇರಳ ಕಾಂಗ್ರೆಸ್ ನಲ್ಲಿಯೂ ಇದೆ ಎಂದು ಕಾಂಗ್ರೆಸ್ ನಾಯಕಿಯೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

ಕೇರಳ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಸಮಸ್ಯೆ ಸಿಮಿ ರೋಸ್ ಬೆಲ್ ಎಂಬುವವರು ಸ್ವಪಕ್ಷದ ನಾಯಕರ ವಿರುದ್ಧವೇ ಇಂತದ್ದೊಂದು ಗಂಭೀರ ಆರೊಪ ಮಾಡಿದ್ದಾರೆ. ಕೇರಳ ಕಾಂಗ್ರೆಸ್ ಘಟಕದಲ್ಲಿಯೂ ಕಾಸ್ಟಿಂಗ್ ಕೌಚ್ ರೀತಿ ದೊಡ್ಡಮಟ್ಟದಲ್ಲಿಯೇ ಸೆಕ್ಸ್ ದಂಧೆ ನಡೆಯುತ್ತಿದೆ ಎಂದಿದ್ದಾರೆ.

ಕೇರಳ ಚಿತ್ರರಂಗದಲ್ಲಿ ನಡೆದಿರುವಂತಹ ಘಟನೆ ರಾಜ್ಯ ಕಾಂಗ್ರೆಸ್ ನಲ್ಲಿಯೂ ನಡೆಯುತ್ತಿದೆ. ಹಿರಿಯ ನಾಯಕರ ಜೊತೆ ಆತ್ಮೀಯರಾಗಿರುವವರಿಗೆ ಮಾತ್ರವೇ ಪಕ್ಷದಲ್ಲಿ ಹುದ್ದೆ, ಉತ್ತಮ ಅವಕಾಶ ನೀದಲಾಗುತ್ತದೆ. ಈ ಬಗ್ಗೆ ನನ್ನ ಬಳಿ ಸೂಕ್ತ ಸಾಕ್ಷ್ಯಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಆದರೆ ಕೇರಳ ಕಾಂಗ್ರೆಸ್ ಮಹಿಳಾ ಘಟಕ ಸಿಮಿ ಅವರ ಆರೋಪವನ್ನು ತಳ್ಳಿ ಹಾಕಿದೆ. ಪಕ್ಷಕ್ಕೆ ಕಳಂಕ ತರುವ ದುರುದ್ದೇಶದಿಂದ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ. ಅಲ್ಲದೇ ಸಿಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದ್ದು, ಕೇಸ್ ಕೂಡ ದಾಖಲಿಸಲಾಗಿದೆ.

Home add -Advt

Related Articles

Back to top button