Latest

ಗೋಲ್ಡ್ ಸ್ಮಗ್ಲರ್ ಸಪ್ನಾ ಸುರೇಶ್ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇರಳದ ಗೋಲ್ಡ್ ಸ್ಮಗ್ಲರ್ ಸ್ವಪ್ನ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬೆಂಗಳೂರಿನ ಕೋರಮಂಗಲ ಹೋಟೆಲ್ ಒಂದರಲ್ಲಿ ಬಂದಿಸಿದ್ದಾರೆ.

ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆಯನ್ನ ಎರಡು ದಿನಗಳ ಹಿಂದಷ್ಟೇ ಎನ್​ಐಎಗೆ ವಹಿಸಲಾಗಿತ್ತು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸ್ವಪ್ನ ಸುರೇಶ್ ಅವರು ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಸ್ವಪ್ನ ಸುರೇಶ್ ಹಾಗೂ ಸುರೇಶ್ ನಾಯರ್ ಅವರಿಬ್ಬರನ್ನ ಕೇರಳದ ಕೊಚ್ಚಿ ನಗರಕ್ಕೆ ಕರೆದೊಯ್ದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನಂತರ ಎನ್​ಐಎ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಅಲ್ಲಿ ವಿಚಾರಣೆ ನಡೆಸಿ ಆ ಬಳಿಕ ಅವರನ್ನ ಬಂಧಿಸಬಹುದೆನ್ನಲಾಗಿದೆ.

1967ರ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯ 16, 17 ಮತ್ತು 18ನೇ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಿರುವನಂತರಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 5ರಂದು ಕಸ್ಟಮ್ಸ್ ಅಧಿಕಾರಿಗಳು 14.82 ಕೋಟಿ ರೂ ಮೌಲ್ಯದ 30 ಕಿಲೋ ಅಪ್ಪಟ ಬಂಗಾರದ ಗಟ್ಟಿಗಳನ್ನ ವಶಪಡಿಸಿಕೊಂಡಿದ್ದರು. ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ ಕಚೇರಿಯ ವಿಳಾಸ ಹೊಂದಿದ್ದ ಆ ಪಾರ್ಸಲ್ ಅನ್ನು ಯುಎಇ ದೇಶದಿಂದ ರಾಜತಾಂತ್ರಿಕ ಮಾರ್ಗದ ಮೂಲಕ ಕಳುಹಿಸಲಾಗಿತ್ತು. ಸರಿತ್ ಅವರು ಈ ಪ್ಯಾಕೇಜ್ ಅನ್ನು ಸ್ವೀಕರಿಸಬೇಕಿತ್ತು. ಕೇರಳ ಪೊಲೀಸರು ಸರಿತ್ ಕುಮಾರ್ ಅವರನ್ನ ಬಂಧಿಸಿದರು. ಯುಎಇ ರಾಜತಾಂತ್ರಿಕ ಕಚೇರಿಯ ಮಾಜಿ ಪಿಆರ್​ಒ ಆಗಿರುವ ಸರಿತ್ ಈ ಹಿಂದೆ ಹಲವು ಬಾರಿ ಇಂಥ ಪಾರ್ಸಲ್​ಗಳನ್ನ ಪಡೆದಿರುವ ವಿಚಾರ ಆತನ ವಿಚಾರಣೆಯಿಂದ ಬೆಳಕಿಗೆ ಬಂದಿತ್ತು.

ಸ್ವಪ್ನ ಸುರೇಶ್ ಕೂಡ ಯುಎಇ ಕಾನ್ಸುಲೇಟ್ ಜನರಲ್ ಕಚೇರಿಯ ಮಾಜಿ ಎಕ್ಸಿಕ್ಯೂಟಿವ್ ಸೆಕ್ರೆಟರಿ ಆಗಿದ್ಧಾರೆ. ರಾಜತಾಂತ್ರಿಕ ಕಚೇರಿಯ ನಕಲಿ ದಾಖಲೆಗಳನ್ನ ಸೃಷ್ಟಿಸಿ ಗಲ್ಫ್ ರಾಷ್ಟ್ರಗಳಿಂದ ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನವನ್ನ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು.ಈ ಸ್ಮಗ್ಲಿಂಗ್ ಪ್ರಕರಣ ದೊಡ್ಡ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದ್ದು ಸ್ವಪ್ನ ಸುರೇಶ್ ಅವರಿಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯೊಂದಿರುವ ಸಂಬಂಧ. ಎಂ ಶಿವಶಂಕರ್ ಅವರೊಂದಿಗೆ ಸ್ವಪ್ನ ಸುರೇಶ್ ನಂಟು ಹೊಂದಿರುವ ವಿಚಾರ ಗೊತ್ತಾಗುತ್ತಲೇ ಕೇರಳದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button