VTU Add
Beereshwara 36
LaxmiTai 5

*ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಸಾಯಿಸಿದ ಪಾಪಿ !!*

Anvekar 3

ಪ್ರಗತಿವಾಹಿನಿ ಸುದ್ದಿ; ಕೇರಳ : ನಮ್ಮ‌ದೇಶದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟೇ ಬಲಿಷ್ಟವಾಗಿದ್ದರು ಹೆಣ್ಣಿನ‌ ಮೇಲೆ ಆಗುತ್ತಿರುವ ಅನ್ಯಾಯ ಹಾಗೂ ಅತ್ಯಾಚಾರಕ್ಕೆ ಮಾತ್ರ ಅಂತ್ಯವೇ ಇಲ್ಲದಂತಾಗಿದೆ. ‌ಪಾಪಿಯೊಬ್ಬ 5 ವರ್ಷದ ಪುಟ್ಟ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ಈ ಧಾರುಣ ಘಟನೆ ಬಗ್ಗೆ ಮಾತಾಡಿರುವ ಎರ್ನಾಕುಲಂ SP ವಿವೇಕ್ ಕುಮಾರ್ ಬಿಹಾರ ಮೂಲದ ದಂಪತಿಯ 5 ವರ್ಷದ ಮಗಳು ಶುಕ್ರವಾರ ಸಂಜೆ ನಾಪತ್ತೆಯಾಗಿದ್ದು, ಆರೋಪಿ ಆಕೆಯನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಅಸ್ಫಾಕ್ ಅಸ್ಲಾಮ್ ಎಂದು ಗುರುತಿಸಲಾಗಿದ್ದು, ಸಿಸಿಟಿವಿಯಲ್ಲಿ ಆತ ಬಾಲಕಿಯನ್ನು ಕರೆದುಕೊಂಡು ಹೋಗುವ ದೃಶ್ಯ ಕಂಡುಬಂದಿದೆ. ಆದ್ದರಿಂದ ಆತನನ್ನು ಅದೇ ದಿನ ರಾತ್ರಿ 9:30ಕ್ಕೆ ವಶಕ್ಕೆ ಪಡೆದೆವು. ಆದರೆ ಆತ ಮದ್ಯಪಾನ ಮಾಡಿದ್ದರಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಆತ ಇರಲಿಲ್ಲ ಎಂದಿದ್ದಾರೆ.

ಶನಿವಾರ ಪ್ರಜ್ಞೆ ಬಂದ ಬಳಿಕ ಈ ಹೀನ ಕೆಲಸವನ್ನು ತಾನೇ ಮಾಡಿರುವುದಾಗಿ ಆರೋಪಿ ಅಸ್ಫಾಕ್ ಬಾಯ್ಬಿಟ್ಟಿದ್ದಾನೆ.‌ ಪೋಷಕರ ಕಣ್ಣು ತಪ್ಪಿಸಿ ಆ ಹುಡುಗುಯನ್ನ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ ಬಳಿಕ ಮೃಗದಂತೆ ಆ‌ ಮಗುವಿನೊಂದು ವರ್ತಿಸಿ ತನ್ನ‌ ಕಾಮದಾಸೆ ಈಡೇರಿಸಿಕೊಂಡಿದ್ದಾನೆ‌. ನಂತರ ಆಕೆಯ ಕತ್ತು ಹಿಸುಕಿ ಸಾಯಿಸಿ ಮೃತದೇಹ ಯಾರಿಗೂ ಕಾಣದ ರೀತಿಯಲ್ಲಿ ಮುಚ್ಚಲು ಕಸಗಳು ಮತ್ತು ಗೋಣಿ ಚೀಲಗಳನ್ನು ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಹುಡುಗಿಯ ಫೋಟೋ ಹಾಕಲಾಗಿತ್ತು. ಇದನ್ನು ನೋಡಿದ ವ್ಯಕ್ತಿಯೋರ್ವ ಹುಡುಗಿಯನ್ನು ಮಾರುಕಟ್ಟೆ ಹಿಂಬದಿಯಲ್ಲಿ ನೋಡಿರುವುದಾಗಿ ತಿಳಿಸಿದ್ದಾನೆ.‌ ಈ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ಮಾರುಕಟ್ಟೆಯ ಹಿಂಭಾಗದಲ್ಲಿ ಶೋಧಕಾರ್ಯವನ್ನು ನಡೆಸಿದ್ದಾರೆ.

ಬಳಿಕ ಬಾಲಕಿಯನ್ನು ಪೋಷಕರಿಗೆ ಜೀವಂತವಾಗಿ ಮರಳಿಸಲಾಗದ್ದರಿಂದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ.

ಅಲ್ಲದೆ ಈ ಕುರಿತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಇದು ಅತ್ಯಂತ ದುಃಖಕರ ಮತ್ತು ದುರಾದೃಷ್ಟಕರವಾದ ಸಂಗತಿಯಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಬಾಲಕಿಯ ಮೃತದೇಹವನ್ನು ಆಕೆ ಓದುತ್ತಿದ್ದ ಶಾಲೆಯಲ್ಲಿ ಇರಿಸಲಾಗಿದ್ದು, ನೂರಾರು ಮಂದಿ ಅಂತಿಮ ನಮನ ಸಲ್ಲಿಸಿ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

Emergency Service
Bottom Add3
Bottom Ad 2