Latest

ಪತ್ರಕರ್ತೆಗೆ ಅಶ್ಲೀಲ ಮೆಸೇಜ್; ಐಎಎಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲು

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಮಹಿಳಾ ಪತ್ರಕರ್ತೆಗೆ ಅಶ್ಲೀಲ ಸ್ಟಿಕ್ಕರ್ ಮೆಸೇಜ್ ಕಳುಹಿಸಿದ್ದ ಐಎಎಸ್ ಅಧಿಕಾರಿ ವಿರುದ್ಧ ಕೇರಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಆಳ ಸಮುದ್ರದ ಮೀನುಗಾರಿಕಾ ಟ್ರಾಲರ್ ನಿರ್ಮಾಣದ ಕುರಿತು ಪ್ರತಿಕ್ರಿಯೆಗಾಗಿ ಮಹಿಳಾ ಪತ್ರಕರ್ತೆ ಐಎಎಸ್ ಅಧಿಕಾರಿ ಪ್ರಶಾಂತ್ ಎನ್ ಅವರನ್ನು ಸಂಪರ್ಕಿಸಿದ್ದರು. ಪತ್ರಕರ್ತೆಯ ಫೋನ್ ನಂಬರ್ ಪಡೆದಿದ್ದ ಅಧಿಕಾರಿ ಬಳಿಕ ವಾಟ್ಸಪ್ ಮೂಲಕ ಅಸಭ್ಯ ಸ್ಟಿಕ್ಕರ್ ಮೆಸೇಜ್ ಕಳುಹಿಸಲು ಪ್ರಾರಂಭಿಸಿದ್ದ.

Home add -Advt

ಅಧಿಕಾರಿ ವರ್ತನೆಗೆ ಬೇಸತ್ತ ಮಹಿಳಾ ಪತ್ರಕರ್ತೆ ಹಾಗೂ ಕೇರಳ ಪತ್ರಕರ್ತರ ಒಕ್ಕೂಟ ಐಎಎಸ್ ಅಧಿಕಾರಿ ಪ್ರಶಾಂತ್ ಎನ್ ವಿರುದ್ಧ ದೂರು ನೀಡಿದ್ದಾರೆ.
ನಕಲಿ ಐಎಎಸ್ ಅಧಿಕಾರಿ ಬಂಧನ

Related Articles

Back to top button