Latest

ಕಪಾಳಕ್ಕೆ ಹೊಡೆದು ಮಾನಸಿಕ ಅಸ್ವಸ್ಥ ವೃದ್ಧನನ್ನನ್ನೇ ಕೊಂದ ಬಿಜೆಪಿ ಮುಖಂಡ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಐಡಿ ಕಾರ್ಡ್ ತೋರಿಸುವಂತೆ ಒತ್ತಾಯಿಸಿ ಮಾನಸಿಕ ಅಸ್ವಸ್ಥ ವೃದ್ಧರೊಬ್ಬರನ್ನು ಬಿಜೆಪಿ ಮುಖಂಡನೊಬ್ಬ ಹೊಡೆದು ಕೊಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿದ್ಸಿದಂತೆ ಆರೋಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದು, ದಿನೇಶ್ ಕುಶ್ವಾಹ ಬಂಧಿತ ಆರೋಪಿ. ಕೊಲೆಯಾದ ವ್ಯಕ್ತಿ 65 ವರ್ಷದ ಭವಾರ್ ಲಾಲ್ ಜೈನ್ ರಟ್ಲಾಮ್ ಜಿಲ್ಲೆಯ ಸರಸಿ ಗ್ರಾಮದ ನಿವಾಸಿ.

ಆರೋಪಿ ಭವಾರ್ ಲಾಲ್ ಗೆ ನೀನು ಮೊಹಮ್ಮದ್, ಐಡಿ ಕಾರ್ಡ್ ತೋರಿಸು ಎಂದು ಪದೇ ಪದೇ ಕಪಾಳಕ್ಕೆ ಹೊಡೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಸಂಪೂರ್ಣ ಹದಗೆಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Home add -Advt

ಮಳೆ ಹಾನಿ ನಿರ್ವಹಣೆಗೆ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ ಸಿಎಂ; ಇಲ್ಲಿದೆ ವಲಯವಾರು ಸಚಿವರ ಪಟ್ಟಿ

Related Articles

Back to top button