
ಪ್ರಗತಿವಾಹಿನಿ ಸುದ್ದಿ : ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಆರ್ಥಿಕ ಅಪರಾಧ ವಿಶೇಷ ನ್ಯಾಯಾಲಯವು ಆದೇಶವನ್ನು ಮಾರ್ಚ್ 14 ಕ್ಕೆ ನಿಗದಿ ಪಡಿಸಿದೆ.
ಇದಕ್ಕೂ ಮೊದಲು ನಟಿ ರನ್ಯಾ ರಾವ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಹೈ ಡ್ರಾಮಾದ ಬಗ್ಗೆ ಕೋರ್ಟ್ ಮುಂದೆ ಡಿಆರ್ ಐ ಅಧಿಕಾರಿಗಳು ವಿವರವಾಗಿ ಬಿಚ್ಚಿಟ್ಟಿದ್ದಾರೆ. ದುಬೈನಿಂದ ಆಗಮಿಸಿದ ನಟಿ ರನ್ಯಾ ರಾವ್ ತಾನೊಬ್ಬಳು ಉನ್ನತ ಅಧಿಕಾರಿಯ ಮಗಳು ಎಂದು ಹೇಳಿಕೊಂಡಿದ್ದಳು.
ಅಷ್ಟೇ ಅಲ್ಲದೆ ನಿಲ್ದಾಣದಲ್ಲಿ ತಪಾಸಣೆಯ ವೇಳೆ ತಪಾಸಣಾಧಿಕಾರಿಗಳ ಬಳಿ ತನ್ನ ಬಳಿ ಏನು ಇಲ್ಲ ಎಂದು ಶಿಷ್ಟಾಚಾರದ ಅಡಿಯಲ್ಲಿ ತನ್ನನ್ನು ಕರೆದೊಯ್ಯಲು ಬಂದಿದ್ದ ಕಾನ್ಸ್ ಟೇಬಲ್ ಸಹಾಯದಿಂದ ಹೊರಗೆ ಬರಲು ಮುಂದಾಗಿದ್ದಾಳೆ. ಈ ವೇಳೆ ಲೋಹಪರಿಶೋಧಕ ಯಂತ್ರ ಚಿನ್ನವನ್ನು ಡಿಟೆಕ್ಟ್ ಮಾಡಿ ಸೈರನ್ ಮಾಡಿದೆ.
ಈ ವೇಳೆ ಕಸ್ಟಮ್ ಅಧಿಕಾರಿಗಳು ತಪಾಸಣೆ ಮಾಡಬೇಕು ಎಂದು ಮನವಿ ಮಾಡಿದರು, ಆದರೆ ಇದಕ್ಕೆ ನಟಿ ನನ್ನ ಬಳಿ ಯಾವುದೇ ವಸ್ತುವಿಲ್ಲ ನಾನು ಪೊಲೀಸ್ ಅಧಿಕಾರಿಯ ಮಗಳು ಎಂದು ವಾದಿಸಿದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ನಟಿ ರನ್ಯಾ ರಾವ್ ಳನ್ನು ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.
ಮಹಿಳಾ ಸಿಬ್ಬಂದಿಗಳು ತಪಾಸಣೆಯ ವೇಳೆ ನಟಿಯ ತೊಡೆ, ಬೆಲ್ಟ್, ಸೊಂಟ, ಪ್ಯಾಂಟ್ ನ ಜೇಬಿನಲ್ಲೂ ಕೂಡ 24 ಕ್ಯಾರೆಟ್ ಗೋಲ್ಡ್ ತುಂಡುಗಳು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ನಟಿಯ ಬಳಿ ದುಬೈನ ನಿವಾಸಿ ಎಂಬ ಗುರುತಿನ ಚೀಟಿ ಕೂಡ ಪತ್ತೆಯಾಗಿದೆ.