Belagavi NewsBelgaum NewsCrimeKannada NewsKarnataka NewsNationalPolitics

*ರಿವಾಲ್ವರ್ ಹಿಡಿದು ಸಾರ್ವಜನಿಕರ ಭಯ ಹುಟ್ಟಿಸುತ್ತಿದ್ದ ವ್ಯಕ್ತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ರಿವಾಲ್ವರ್ ಹೀಡಿದು ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಆರೋಪಿಯನ್ನು ಬಂಧಿಸಿ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ.‌

ಆರೋಪಿ ಶಂಕರ ಬಸವರಾಜ ಬಂಡಿವಡ್ಡರ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಬೆಳಗಾವಿ ನಗರದ ಕಾಲೇಜ ರಸ್ತೆಯಲ್ಲಿರುವ ಸೆಂಟ್ರಲ್ ಸರ್ಜಿಕಲ್ ಮೆಡಿಕಲ್ ಅಂಗಡಿ ಎದುರಿಗೆ ಸಾರ್ವಜನಿಕರ ರಸ್ತೆಯ ಮೇಲೆ ಕೈಯಲ್ಲಿ ರಿವಾಲ್ವರ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ತಿರುಗಾಡುತ್ತಿದ್ದಾಗ ಖಡೇಬಜಾರ ಪೊಲೀಸ್ ಠಾಣೆಯ ಸಿಪಿಸಿ ಸುನೀಲ ಕನ್ನಿರಾಮ ಚವ್ಹಾನ್ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಅವನಿಂದ ರಿವಾಲ್ವರ ಜಪ್ತಿ ಮಾಡಿದ್ದಾರೆ.

Home add -Advt

ಆರೋಪಿ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆ ಪ್ರ ಸಂಖ್ಯೆ. 43/2026 ಕಲಂ. 270 ಬಿಎನ್‌ಎಸ್ ಹಾಗೂ 30 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿ, ತನಿಖೆಯನ್ನು ಮುಂದುವರೆಸಲಾಗಿದೆ.

Related Articles

Back to top button