Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೋಬೈಲ್ ಫೋನ್ ಬಳಸಿ ಹಣ ಹಚ್ಚಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ ಆನ್‌ಲೈನ್ ಮುಖಾಂತರ ಆಡುತ್ತಿದ್ದಾಗ ಮಾರ್ಕೆಟ್ ಠಾಣೆ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ಮಹಮ್ಮದಸಾದಿಕ ಬಂದೇನವಾಜ ಮಲ್ಲಡದವರ (30), ಮೋಸೀನ್ ಮಹಮ್ಮದಹನೀಫ ಖಲೀಪಾ (29) ಹಾಗೂ ಸೂಫಿಯಾನ್ ಶೇಖ ಬಂಧಿತ ಆರೋಪಿಗಳು.

Home add -Advt

ಪಿಎಸ್ಐ ಹುಸೇನಸಾಬ ಕೆರೂರ ಹಾಗೂ ಸಿಬ್ಬಂದಿಯವರ ದಾಳಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಅವರಿಂದ ಬೆಟ್ಟಿಂಗ್ ಸಲುವಾಗಿ ಬಳಸಿದ 6 ಸಾವಿರ ಬೆಲೆಯ ಎರಡು ಮೋಬೈಲ್, 310 ರೂ ನಗದು ಜಪ್ತಪಡಿಸಿಕೊಂಡು ಅವರ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರ ಸಂ. 94/2026 ಕಲಂ.78(1)(a)(vi) ಕೆ. ಪಿ. ಕಾಯ್ದೆ-1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Related Articles

Back to top button