ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಕೊವಿಡ್ -೧೯ ಹಿನ್ನೆಲೆಯಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯುತ್ತಿದ್ದು ಖಾನಾಪುರ ತಾಲೂಕಿನಲ್ಲಿ ಕಲಿಯುತ್ತಿರುವ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ನಿರ್ಭಯವಾಗಿ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಹಯವಾಗುವ ನಿಟ್ಟಿನಲ್ಲಿ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೆಶದಿಂದ ’ಫೊನ್ ಇನ್ ಕಾರ್ಯಕ್ರಮ’ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಚಾಲನೆ ನೀಡಿದರು.
ಆಯ್ದ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಈ ಕಾರ್ಯಕ್ರಮವನ್ನು ೧೦ ಜೂನ್ ೨೦೨೧ ರ ವರೆಗೆ ಪ್ರತಿ ಶನಿವಾರ ಮಧ್ಯಾಹ್ನ ೩ ಘಂಟೆಯಿಂದ ೫ ಗಂಟೆವರೆಗೆ ನಡೆಸಲಾಗುವುದು ಎಂದು ಯಕ್ಕುಂಡಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪೊಷಕರು ಹಾಗೂ ಎಲ್ಲ ಶಿಕ್ಷಕರು ಪ್ರೆರಣೆ ನೀಡುವುದಾಗಿ ಅವರು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ ಆರ್ ಅಂಬಗಿ, ಶಿಕ್ಷಣ ಸಂಯೋಜಕರಾದ ಕ್ರಾಂತಿ ಪಾಟೀಲ್, ಬಿರಾದಾರ, ಎಸ್ ಎಮ್ ಕಮ್ಮಾರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಈ ಸಂಪನ್ಮೂಲ ವ್ಯಕ್ತಿಗಳಿಗೆ ಮಿಸ್ ಕಾಲ್ ನೀಡಿ ಅಥವಾ ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು.
ಪ್ರಥಮ ಭಾಷೆ ಕನ್ನಡ – ಆರ್ ಕೆ ತರಗಾರ -೯೯೦೧೬೭೬೯೫೯, ಎಸ್ ಎಸ್ ಹಿರೆಮಠ -೯೯೮೦೧೫೭೨೯೩
ಪ್ರಥಮ ಭಾಷೆ ಮರಾಠಿ- ಟಿ ವಾಯ್ ಅಳವಣಿ -೯೯೬೪೫೮೯೬೭೧, ಎಮ್ ಎನ್ ಉತ್ತುರಕರ- ೯೯೬೪೩೯೨೪೨೦
ದ್ವೀತಿಯ ಭಾಷೆ ಇಂಗ್ಲೀಷ್ – ಸಿ. ಎ. ಜೈನಾಪುರೆ -೯೭೩೧೭೯೪೦೫೦, ಎಸ್ ಆಯ್ ರೊಟ್ಟಿ- ೭೭೬೦೪೩೨೨೩೨
ತೃತಿಯ ಭಾಷೆ ಕನ್ನಡ- ಎನ್ ವ್ಹಿ ನ್ಹಾವಿ -೯೧೬೪೮೯೦೬೮೮, ಎಮ್ ಎಸ್ ತಂಗಡೆ -೯೪೪೮೮೮೪೬೨೮
ತೃತಿಯ ಭಾಷೆ ಹಿಂದಿ – ಪ್ರಶಾಂತ ಪಾರಧಿ- ೯೪೮೧೬೮೦೨೨೩, ಎಮ್ ಆಯ್ ಕಮತಿ- ೯೯೦೨೭೨೪೪೧೩
ಗಣಿತ -ಕನ್ನಡ ಮಾಧ್ಯಮ- ಸಂತೋಷ ನಾಯಿಕ -೯೯೮೬೨೪೭೫೭೫, ಜೆ ಆಯ್ ಮಾಗಿ- ೯೪೮೦೯೨೫೮೦೭
ಗಣಿತ-ಮರಾಠಿ ಮಾಧ್ಯಮ – ಪಿ. ಪಿ. ಕಾಶಿದ ೯೭೪೧೮೪೮೯೧೪, ಕೆ ಆರ್ ಗುರವ -೮೭೨೨೧೦೩೨೦೨
ವಿಜ್ಞಾನ- ಕನ್ನಡ ಮಾಧ್ಯಮ- ಎಸ್ ವ್ಹಿ ಬಾಡಕರ- ೯೪೮೨೯೩೨೩೫೬, ವಿಜಯಲಕ್ಷ್ಮಿ ಕೆ. -೯೪೪೯೩೫೯೭೧೫
ವಿಜ್ಞಾನ -ಮರಾಠಿ ಮಾಧ್ಯಮ – ವರ್ಷಾ ಚೌಗುಲೆ- ೯೭೪೧೨೭೩೩೨೯, ಲೊಹಾರ ೯೭೩೯೮೮೪೪೧೩
ಸಮಾಜ ವಿಜ್ಞಾನ -ಕನ್ನಡ ಮಾಧ್ಯಮ – ಸಿ ಎಸ್ ಕೋಳಿ -೯೬೩೨೭೧೪೭೯೦, ಕಲಮಠ- ೯೦೩೫೩೯೪೯೫೯
ಸಮಾಜ ವಿಜ್ಞಾನ -ಮರಾಠಿ ಮಾಧ್ಯಮ – ಎಸ್ ಡಿ ಕುದಳೆ -೮೨೭೭೬೦೪೯೧೭, ಎಸ್ ಡಿ. ಪಾಟಿಲ -೯೫೩೫೦೭೮೬೯೭
ಗಣಿತ- ಆಂಗ್ಲ ಮಾಧ್ಯಮ – ಬೆಂಜ್ಯಾಮಿನ್ ಜೊನ್ಸ್ -೭೩೩೭೮೨೧೮೮೯, ಪಿ. ಎ. ಪಾಟಿಲ -೬೩೬೨೭೪೦೮೭೨
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ