Kannada NewsKarnataka News
ಖಾನಾಪುರ ತಾಲೂಕು, ಮರಾಠಾ ಸಮಾಜ ಅಭಿವೃದ್ಧಿ: ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪುರ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಹಾಗೂ ಮರಾಠ ಸಮಾಜದ ಅಭಿವೃದ್ಧಿಗಾಗಿ ಪಕ್ಷದ ಹಲವಾರು ವರಿಷ್ಠರನ್ನು ಭೇಟಿ ಮಾಡಿರುವ ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಖಾನಾಪುರ ತಾಲೂಕು ಉಸ್ತುವಾರಿ ಡಾ: ಸೋನಾಲಿ ಸರ್ನೋಬತ್, ಈ ಸಂಬಂಧ ಮನವಿಗಳನ್ನು ಸಲ್ಲಿಸಿದ್ದಾರೆ.

ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಕ್ಷೇತ್ರದ ರಾಜಕೀಯ ಬೆಳವಣಿಗೆಯ ಬಗ್ಗೆ ಹಾಗೂ ಮಹಿಳಾ ಮೋರ್ಚಾ ಸಂಘಟನೆಯ ಬಗ್ಗೆ ಚರ್ಚಿಸಿದರು.
ಪಕ್ಷದ ವರಿಷ್ಠರನ್ನು ಈ ಸಂದರ್ಭದಲ್ಲಿ ಸತ್ಕರಿಸಿ, ಖಾನಾಪುರ ತಾಲೂಕಿನ ಅಭಿವೃದ್ಧಿ ಕುರಿತು ಮತ್ತು ಮರಾಠ ಸಮಾಜದ ಅಭಿವೃದ್ಧಿ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕೆಂದು ವರಿಷ್ಠರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಮುಖಂಡರು ಬಸವರಾಜ ಈಶ್ವರ ಸಾಣೀಕೊಪ್ಪ ಕಡೇಮನಿ, ಅರ್ಜುನ್ ಗಾವಡೆ, ಅನಂತ ಗಾವಡೆ, ಜ್ಞಾನೇಶ್ವರ ಗಾವಡೆ, ಭಾರತಿ ತಕ್ಕಡೆ, ನಾಗೇಶ್ ರಾಮಜಿ, ವಿನಾಯಕ್ ನಾಯಕ್ ಮುಂತಾದವರು ಉಪಸ್ಥಿದ್ದರು.
https://pragati.taskdun.com/latest/memorandum-solve-problems-khanapur-sonalisarnobat/
https://pragati.taskdun.com/belagavi-news/after-75-years-these-villagers-got-freedom-thanks-to-dr-sonali-sarnobat/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ