
ಪ್ರಗತಿವಾಹಿನಿ ಸುದ್ದಿ: ಖಾನಾಪುರ ತಾಲ್ಲೂಕಿನ ಇದ್ದಲಹೊಂಡ ಗ್ರಾಮದ ಹೊರವಲಯದಲ್ಲಿ ಕಾಲು ಜಾರಿ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಇದ್ದಲಹೊಂಡ ಗ್ರಾಮದ ದಿಗ್ವಿಜಯ ಮನೋಹರ ಜಾಧವ (36) ಮೃತ ವ್ಯಕ್ತಿ. ಶುಕ್ರವಾರ ಬೆಳಿಗ್ಗೆ ಅವರು ಹೊಲಕ್ಕೆ ಹೋಗಿ ಬಹಳ ಸಮಯವಾದರೂ ಮರಳಿ ಬಾರದ ಕಾರಣ ಕುಟುಂಬದವರು ಹೊಲಕ್ಕೆ ಹೋಗಿ ಪರಿಶೀಲಿಸಿದಾಗ ಬಾವಿಯ ಬಳಿ ಅವರ ಪಾದರಕ್ಷೆಗಳು ಪತ್ತೆಯಾಗಿದ್ದವು. ಘಟನಾ ಸ್ಥಳಕ್ಕೆ ತೆರಳಿದ ಈಜು ಪರಿಣಿತರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಬಾವಿಯಿಂದ ದಿಗ್ವಿಜಯ ಅವರ ಶವವನ್ನು ಹೊರತೆಗೆದರು.
ಮೃತರು ಪತ್ನಿ, ಒಂದು ವರ್ಷದ ಮಗು, ತಾಯಿ, ತಂದೆ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ