VTU Add
Beereshwara 36
LaxmiTai 5

*ಖಾನಾಪುರದಲ್ಲಿ ಧಾರಾಕಾರ ಮಳೆ; ಕೆಸರು ಗದ್ದೆಯಂತಾದ ತಾರವಾಡ ರಸ್ತೆ; ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು*

Anvekar 3

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ತರವಾಡಗ್ರಾಮದ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿದೆ.

ಗೋಟ್ಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾರವಾಡ ಗ್ರಾಮದ ರಸ್ತೆಗೆ ಸುಮಾರು 55 ಲಕ್ಷದ ವೆಚ್ಚದಲ್ಲಿ ಅನುದಾನ ಮಂಜೂರಾಗಿದ್ದು ಗುತ್ತಿಗೆದಾರರು ಈಗಾಗಲೇ ಡಾಂಬರೀಕರಣ ಹಾಗೂ ಮೆಟ್ಲಿಂಗ್ ಮಾಡಿ ಒಂದೆರಡು ತಿಂಗಳು ಕಳೆದಿದೆ. ಆದರೆ ಖಾನಾಪುರದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ರಸ್ತೆ ಕೆಸರಿಂದ ಕೂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗೆದಾರರು ರಸ್ತೆ ಮಾಡಿದ್ದಾರೋ ಇಲ್ಲ ಮರಳು ಹಾಕಿ ರಸ್ತೆ ಹಾಳು ಮಾಡಿದ್ದಾರೋ ಒಂದೂ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನ ಸವಾರರು, ಶಾಲಾ ಮಕ್ಕಳು, ಗರ್ಭಿಣಿಯರು, ಹಾಲಿನ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.

Cancer Hospital 2
Emergency Service

ತಾರವಾಡ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ರಸ್ತೆಯಲ್ಲಿ ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಖಾನಾಪುರ ಪಂಚಾಯತ್ ರಾಜ್ ಉಪ ವಿಭಾಗ ಸಹಾಯಕ ಕಾರ್ಯನಿರ್ವಕ ಅಭಿಯಂತರರಿಗೆ ಮನವಿ ಮಾಡಿದ್ದಾರೆ. ಆದಷ್ಟು ಬೇಗ ರಸ್ತೆ ಸರಿಪಡಿಸದಿದ್ದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಈಭಾಗದ ಯುವಕರು ಎಚ್ಚರಿಸಿದ್ದಾರೆ.

ಈ ವೇಳೆ ವಿಜಯ ವೀರ್. ಬಹುಜಂಗ ಅಪ್ಲೇಕರ್. ಸುನಿಲ್ ಅಪ್ಪಲೇಕರ್. ರಾಮ ಇಶ್ರಾನಿ .ಕಲ್ಲಪ್ಪ ಕಂಗ್ರಾಕರ್ ಗ್ರಾಮದ ಯುವಕರು ಉಪಸ್ಥಿದ್ದರು.

Bottom Add3
Bottom Ad 2