Kannada NewsLatest

ಕುಗ್ರಾಮ “ಚಾಪೊಲಿ” ಯಲ್ಲಿ ರಾತ್ರಿಯೂ ಬೆಳಗುತ್ತಿರುವ ಸೂರ್ಯ

ಪ್ರಗತಿವಾಹಿನಿ ಸುದ್ದಿ; ಚಾಪೊಲಿ: ಪಶ್ಚಿಮ ಘಟ್ಟದ ಮಡಿಲಲ್ಲಿಯ ಖಾನಾಪುರ ತಾಲೂಕಿನ ಚಾಪೋಲಿ ಎಂಬ ಕುಗ್ರಾಮ ಕಾಡು ಪ್ರಾಣಿಗಳ ದಾಳಿಗೆ ಹೆಸರಾದ ಊರು. ಆದರೆ ಇಂದು ಸುದ್ದಿಯಾಗುತ್ತಿರುವುದು ಇಡೀ ಊರು ಸಂಪೂರ್ಣ ಸೌರ ವಿಧ್ಯತ್ ಗ್ರಾಮವಾಗಿ ಹೊರ ಹೊಮ್ಮಿದೆ. ಸುಮಾರು ನೂರಾ ನಲವತ್ತು ಕುಟುಂಬ ಇಲ್ಲಿ ನೆಲಸಿದ್ದು, ಎಲ್ಲರೂ ಸಾಮೂಹಿಕ ಬತ್ತದ ಗದ್ದೆಗಳನ್ನು ಹೊಂದಿದ್ದು, ಹೆಚ್ಚಿನ‌ ಯುವಕರು ಗೋವಾದಲ್ಲಿ ಕೆಸಕ್ಕೆ ಹೋಗಿರುತ್ತಾರೆ. ಬೆಳಗಾವಿ ಗೋವಾ ರಸ್ತೆಯ ಜಾಂಬೋಟಿಯಿಂದ ಹತ್ತು ಕಿಲೋಮೀಟರ್ ಕಡಿದದಾದ ಹಾದಿ ಹೊಂದಿದ್ದು. ಯಾವುದೇ ಮೂಲಭೂತ ಸೌಕರ್ಯಚಿತ ಹಳ್ಳಿ ಇದಾಗಿದ್ದು ಮಳೆಗಾಲದ ನಾಲ್ಕು ತಿಂಗಳು ಸಂಪರ್ಕವೂ ಕಷ್ಟ ಮತ್ತು ವಿಧ್ಯುತ್ ಅಂತು ಕನಸು.

ಏನಿದು ಸೌರ ಗ್ರಾಮ ?

ಸೆಲ್ಕೊ ಸಂಸ್ಥೆ ಸುಮಾರು ಐದು ವರ್ಷಗಳ ಹಿಂದೆ ಈ ಊರನ್ನು ಗುರುತಿಸಿ ಸೌರವಿಧ್ಯುತ್ ಮತ್ತು ಜೀವನಾಧಾರದ ಬಗ್ಗೆ ಮಾಹಿತಿ ನೀಡಿ ತಮ್ಮ ಮನೆಯ ಬೆಳಕಿನ ಸ್ವಾವಲಂಬನೆ ಪಡೆಯುವಂತೆ ಪ್ರಯತ್ನಿಸಿತು ಆದರೆ ಅಷ್ಟು ಹಣ ವಿನಿಯೋಗಿಸುವ ಸಾಧ್ಯತೆ ಚಾಪೋಲಿ ಗ್ರಾಮಸ್ಥರಲ್ಲಿ ಸಾಧ್ಯತೆ ಇಲ್ಲದಿದ್ದರಿಂದ ಅನೇಕ ಸಂಘ ಸಂಸ್ಥೆ ಸಂಪರ್ಕಿಸುತ್ತಿರುವಾಗ ಮುಂದೆ ಬಂದಿದ್ದು ರೋಟರಿ ಮಿಡ್ ಟವ್ನ್ ಬೆಳಗಾವಿ. ಆಗಿನ ಅಧ್ಯಕ್ಷರಾದ ರೊಟೆರಿಯನ್ ವಿಲಾಸ್ ಬದಾಮಿ ಇದನ್ನ ಕ್ಲಬ್ ನಲ್ಲಿ ಚರ್ಚಿಸಿ ಪ್ರತಿ ಮನೆಗೆ ತಲಾ ಎರಡೂವರೆ ಸಾವಿರದಂತೆ ಸಹಾಯ ನೀಡಿದರು. ಇನ್ನುಳಿದಂತೆ ಸೆಲ್ಕೊ ಸಂಸ್ಥೆ ಎರಡು ಸಾವಿರದ ಎಳನೂರೈವತ್ತು ಪ್ರತಿ ಮನೆಗೆ ನೀಡಿ ಇಳಿದ ಐದು ಸಾವಿರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಾಲದೊಂದಿಗೆ ಮೊದಲ ಹಂತದಲ್ಲಿ ನಲವತ್ತೈದು ಮನೆಗೆ ಬೆಳಕನ್ನು ಒದಗಿಸಲಾಯಿತು.

ಮಳೆಗಾಲದಲ್ಲಿ ಈ ಪರ್ಯಾಯ ವ್ಯವಸ್ಥೆ ಕಂಡ ಗ್ರಾಮಸ್ಥರು ಒಂದಾಗಿ ಎಲ್ಲಾ ಮನೆಗೆ ಈ ಸದುಪಯೋಗ ಪಡೆಯಲು ಮುಂದಾದರು.

ಈ ವರೆಗೆ ಹಂತ ಹಂತವಾಗಿ ಎರಡೂ ಸಂಸ್ಥೆಯವರು ಸೇರಿ ಊರಿಗೆ ಎರಡು ಬೀದಿ ದೀಪ, ಒಬ್ಬ ಬಡ ಮಹಿಳೆಗೆ ಸೌರ ವಿದ್ಯುತ್ ಆಧಾರಿತ ಹೊಲಿಗೆಯಂತ್ರ ಮತ್ತು ಒಂದು ಸೌರ ವಿದ್ಯುತ್ ಆಧಾರಿತ ಚಿಕ್ಕ ಅಕ್ಕಿ ಗಿರಣಿ ಸ್ಥಾಪಿಸು ಮುಖಾಂತರ ಮಾದರೀ ಊರನ್ನಾಗಿಸಿದ್ದಾರೆ.

ಸಂಜೆ ಕತ್ತಲಾಗುತ್ತಿದ್ದಂತೆ ಸ್ಥಬ್ದವಾಗುತ್ತಿದ್ದ ಚಾಪೋಲಿ ಈಗ ರಾತ್ರಿಯೂ ಸೂರ್ಯನ‌ ಬೆಳಕನ್ನು ಕಾಣುತ್ತಿದೆ. ಮಕ್ಕಳ ಅಭ್ಯಾಸ ಚೆನ್ನಾಗಿದೆ ಮತ್ತು ಹಾವು ಚೇಳಿನ ಕಾಟ ತಪ್ಪಿಸಿ ಊರನ್ನು ಬೆಳಗಿಸುವ ಯೋಜನೆ ರೂಪಿಸಿ ಸೆಲ್ಕೊ ಸೋಲಾರ್ ಸಂಸ್ಥೆ ಮತ್ತು ಸಹಾಯ ನೋಡಿದ ರೋಟರಿ ಸಂಸ್ಥೆ, ಕೆ.ವಿ.ಜಿ.ಬಿಗೆ ಗ್ರಾಮಸ್ಥರು ಧನ್ಯಾದ ಎಂದಿದ್ದಾರೆ.

ಈ ಬಗ್ಗೆ ನಾಳೆ ಚಾಪೋಲಿ ಗ್ರಾಮಕ್ಕೆ ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಶ್ರೀ ಸಂಗ್ರಾಮ ಪಾಟೀಲ್ , ಸೆಲ್ಕೊ ಸಂಸ್ಥೆಯ ಡಿ.ಜಿ.ಎಮ್ ಶ್ರೀ ಪ್ರಸನ್ನ ಹೆಗಡೆ ಬೇಟಿ ನೀಡಿ ಸಂಪೂರ್ಣ ‌ಸೌರ ಗ್ರಾಮದ ಲೋಕಾರ್ಪಣೆ ಮಾಡಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button