Latest

*ಕಿಚ್ಚ ಸುದೀಪ್ ನೋಡಲು ಮುಗಿ ಬಿದ್ದ ಅಭಿಮಾನಿ; ಆಯತಪ್ಪಿ ಕೆಳಗೆ ಬಿದ್ದ ಸಚಿವ ಸೋಮಣ್ಣ*

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ನಟ ಕಿಚ್ಚ ಸುದೀಪ್ ಚಾಮರಾಜನಗರ ಜಿಲ್ಲೆಯ ಸಂತೆಮಾರೆನಹಳ್ಳಿಯಲ್ಲಿ ಭರ್ಜರಿ ರೋಡ್ ಶೋ, ಪ್ರಚಾರ ನಡೆಸಿದ್ದಾರೆ. ಈ ವೇಳೆ ಅವಘಡವೊಂದು ಸಂಭವಿಸಿದೆ.

ಕಾರಿನ ಮೇಲೆ ನಿಂತು ನಟ ಕಿಚ್ಚ ಸುದೀಪ್ ಹಾಗೂ ಸಚಿವ ವಿ.ಸೋಮಣ್ಣ ಜನರತ್ತ ಕೈ ಬೀಸುತ್ತಿದ್ದ ವೇಳೆ ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಅವರನ್ನು ನೋಡಲು ಕಾರಿನ ಮೇಲೆ ಹತ್ತಿದ್ದಾನೆ ತಾನು ಆಯತಪ್ಪುತ್ತಿದ್ದಂತೆ ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡಿದ್ದಾನೆ. ಸಚಿವ ಸೋಮಣ್ಣ ಅಭಿಮಾನಿಯ ಸಮೇತವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಕಿಚ್ಚ ಸುದೀಪ್ ಹಾಗೂ ಇತರರು ಸಚಿವರನ್ನು ಮೇಲಕೆತ್ತಿದ್ದಾರೆ.

ಇದೇ ವೇಳೆ ನೆಚ್ಚಿನ ನಟನನ್ನು ನೋಡಲು ಸಾಗರೋಪಾದಿಯಲ್ಲಿ ಜನರು ಸಂತೇಮಾರೇನಹಳ್ಳಿಗೆ ಆಗಮಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

https://pragati.taskdun.com/siddaramaiahvarunacampaign/

Home add -Advt

Related Articles

Back to top button