Belagavi NewsBelgaum News
*ಉದ್ಯಮಿ ಕಿಡ್ನ್ಯಾಪ್ ಮಾಡಿ 5 ಕೋಟಿಗೆ ಬೇಡಿಕೆ: ಸಚಿವ ಜಾರಕಿಹೊಳಿ ಆಪ್ತೆ ಎಂದು ಹೇಳಿಕೊಂಡಿದ್ದವಳು ಅರೆಸ್ಟ್*


ಪ್ರಗತಿವಾಹಿನಿ ಸುದ್ದಿ: ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಬೆಳಗಾವಿಯ ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ಬಂಧಿತ ಆರೋಪಿ. ಫೆ.14ರಂದು ಉದ್ಯಮಿ ಬಸವರಾಜ್ ಅಂಬಿ ಎಂಬುವರನ್ನು ಕಿಡ್ನ್ಯಾಪ್ ಮಾಡಿದ್ದ ಮಂಜುಳಾ ಹಾಗೂ ಗ್ಯಾಂಗ್ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಸಂಬಂಧ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿದಾಗ ಆರೋಪಿಗಳು ಕಿಂಗ್ ಪಿನ್ ಮಂಜುಳಾ ಹೆಸರು ಬಾಯ್ಬಿಟ್ಟಿದ್ದರು.
ಕಿಂಗ್ ಪಿನ್ ಮಂಜುಳಾ ಕಾಂಗ್ರೆಸ್ ಕಾರ್ಯಕರ್ತೆ, ತಾನು ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಪ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ಇದೀಗ ಮಂಜುಳಾಳನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ