![](https://pragativahini.com/wp-content/uploads/2025/02/kidnap-.jpg)
ಪ್ರಗತಿವಾಹಿನಿ ಸುದ್ದಿ: ಮೋಸ್ಟ್ ವಾಂಟೆಡ್ ಕಿಡ್ನ್ಯಾಪರ್ ಬಾಂಬೆ ಸಲೀಂ ನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗಂಗಾನಹಳ್ಳಿಯ ಅಶ್ವತ್ಥನಾರಾಯಣಸ್ವಾಮಿ ಎಂಬುವವರ ಅಪಹರಣ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಇದೀಗ ಬಾಂಬೆ ಸಲೀಂ ಹಾಗೂ ಗ್ಯಾಂಗ್ ನ್ನು ಬಂಧಿಸಿದ್ದಾರೆ. ಬಾಂಬೆ ಸಲಿಂ, ಅನಿಲ್, ಚೇತನ್, ನಾಗೇಶ್, ಬಾಬುರೆಡ್ಡಿ, ವಾಸಿಂ, ಅಸ್ಲಾಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣ ಹಾಗೂ ದರೋಡೆ ಪ್ರಕರಣ ದಾಖಲಾಗಿದೆ.
ಗಂಗಾನಹಳ್ಳಿಯ ಅಶ್ವತ್ಥನಾರಾಯಣ ಸ್ವಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವೇಳೆ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಆದಿಗಾನಹಳ್ಳಿ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಿಡ್ನ್ಯಾಪ್ ಮಾಡಿದ್ದ ಬಾಂಬೆ ಸಲೀಂ ಹಾಗೂ ಗ್ಯಾಂಗ್, ಕಾರಿನಲ್ಲಿದ್ದ 16 ಲಕ್ಷ ಹಣ ದೋಚಿದ್ದರು. ಅಲ್ಲದೇ ಅಶ್ವತ್ಥನಾರಾಯಣ ಸ್ವಾಮಿ ಅವರನ್ನು ಅಪಹರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ಅಶ್ವತ್ಥನಾರಾಯಣ ಅವರ ಮಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟಿದ್ದರು. ಈ ಹಿನ್ನೆಲೆಅಲ್ಲಿ ಬಾಗೇಪಲ್ಲಿ ಠಾಣೆಯಲ್ಲಿ ಅಪಹರಣ, ದರೋಡೆ ಪ್ರಕರಣ ದಾಖಲಾಗಿತ್ತು. ಇದೀಗ ಬಾಂಬೆ ಸಲೀಂ ಹಾಗೂ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿ ಇದ್ದ 30 ಲಕ್ಷ ಮೌಲ್ಯದ ಕಾರು, 5,15,000 ನಗದು ಹಣ, 2 ಬೈಕ್, ಚಾಕು, ಮಚ್ಚು, ರಾಡ್ ಜಪ್ತಿ ಮಾಡಿದ್ದಾರೆ.
ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಕಿದ್ನ್ಯಾಪರ್ ಆಗಿದ್ದ ಬಾಂಬೆ ಸಲಿಂ, 12 ವರ್ಷದವನಾಗಿದ್ದಾಗಲೇ ಅಂಗಡಿ ಮಾಲಿಕನನ್ನು ಕೊಂದು ಎಸ್ಕೇಪ್ ಆಗಿದ್ದ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಕಿಡ್ನ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ