Kannada NewsKarnataka NewsLatest

*ಗಣೇಶ ಹಬ್ಬಕ್ಕೆ ಡಿಜೆ ನಿಷೇಧ ಇಲ್ಲ; ಸಚಿವ ಶಿವರಾಜ್ ತಂಗಡಗಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಈ ವರ್ಷ ಗಣೇಶ ಹಬ್ಬದ  ಆಚರಣೆಗೆ ಭರ್ಜರಿ ತಯಾರಿ ನಡೆಸಲಾಗಿದೆ.‌ ಆದರೆ ಡಿಜೆ ಬಳಕೆ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು, ಆದರೆ ಇದಕ್ಕೆ ಸಚಿವ ಶಿವರಾಜ ತಂಗಡಗಿ ತೆರೆ ಏಳೆದಿದ್ದಾರೆ.‌

ಈ ಬಗ್ಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, ರಾಜ್ಯದಲ್ಲಿ ಗಣೇಶ ಹಬ್ಬದ ವೇಳೆ ಡಿಜೆ ಬಳಕೆಯನ್ನು ಸರ್ಕಾರ ನಿಷೇಧಿಸಿತ್ತು. ಆದರೆ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Home add -Advt

ಗಣೇಶ ಹಬ್ಬದಲ್ಲಿ ಡಿಜೆ ನಿಷೇಧಿಸಿದ್ದಾರೆ ಎಂದು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರ ಮಾತನ್ನು ಕೇಳಬೇಡಿ. ಬಿಜೆಪಿಯವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ನ ಮಾರ್ಗಸೂಚಿಯಂತೆ ಎಷ್ಟು ಡಿಸಿಬಲ್ ಇರಬೇಕೋ ಅಷ್ಟು ಇದ್ದಾರೆ ಸಾಕು ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ಗಣೇಶ ಹಬ್ಬದ ವೇಳೆ ಡಿಜೆ ಬಳಕೆ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಈ ಬಗ್ಗೆ ಸದನದಲ್ಲಿ ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಆದೇಶವನ್ನು ವಾಪಸ್ ಪಡೆಯಲಾಗಿದೆ.

Related Articles

Back to top button