Health

*ನಾಲಿಗೆ ರುಚಿ ಎಂದು ಸಿಕ್ಕ ಸಿಕ್ಕ ಆಹಾರ ಸೇವಿಸುವ ಮುನ್ನ ಕಿಡ್ನಿ ಆರೋಗ್ಯದ ಬಗ್ಗೆ ಇರಲಿ ಎಚ್ಚರ*

ಕೆಎಲ್ ಇ ಆಸ್ಪತ್ರೆ ವೈದ್ಯ ಡಾ.ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ ಸಲಹೆ

ಪ್ರಗತಿವಾಹಿನಿ ಸುದ್ದಿ: ನಾಲಿಗೆ ರುಚಿ ನೋಡಿದರೆ ಕಿಡ್ನಿ ಹಾಳಾಗುವ ಸಮಯ ಅಧಿಕ. ಬಿಪಿ, ಕೊಲೆಸ್ಟರಾಲ್, ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡಿ, ವೈದ್ಯರ ಸಲಹೆ ಇಲ್ಲದೆ ಅನಾವಶ್ಯಕ ಔಷಧಿ ಸೇವನೆ ಬೇಡ, ಇದರಿಂದ ಕಿಡ್ನಿ ಹಾಳಾಗುವದನ್ನು ತಡೆಯಬಹುದು ಅಥವಾ ಮುಂದೂಡಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು. ಸುಮಾರು 30 ವರ್ಷಗಳ ಕಾಲ ಡಯಾಲಿಸಿಸ್ ಮೇಲೆ ಇದ್ದು ಸಹಜವಾದ ಜೀವನ ನಡೆಸುತ್ತಿದ್ದಾರೆ ಎಂದು ಹಿರಿಯ ನೆಪ್ರಲಾಜಿಸ್ಟ ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ(ಖಾನಪೇಟ) ಅವರು ಹೇಳಿದರು.


ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರೊಲಾಜಿ ವಿಭಾಗವು ಆಸ್ಪತ್ರೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಿಡ್ನಿ ಹಾಳಾದರೆ ಡಯಾಲಿಸಿಸ್ ಅಥವಾ ಕಸಿ ಮಾಡುವದೊಂದೆ ಪರಿಹಾರ. ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡದಲ್ಲಿನ ಹರಳು ಹಾಗೂ ಮೂತ್ರನಾಳದ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.


ಅವಶ್ಯವಿರುವ ವೈದ್ಯಕೀಯ ಸೌಲಭ್ಯ, ಅಂಗಾಂಗದಾನದ ಕಾರ್ಯ ಹಾಗೂ ಕಸಿ(ಟ್ರಾನ್ಸಪ್ಲಾö್ಯಂಟ) ಶಸ್ತçಚಿಕಿತ್ಸೆ ನೆರವೇರಿಸುವಲ್ಲಿ ಇನ್ನೂ ಹೆಚ್ಚಾಗಿ ಕರ‍್ಯಪ್ರವೃತ್ತರಾಗಬೇಕು. ಕಿಡ್ನಿ ಹಾಳಾದರೆ ಡಯಾಲಿಸಿಸ್ ಅಥವಾ ಕಸಿ ಮಾಡುವದೊಂದೆ ಪರಿಹಾರ ಎಂದು ಕೆಎಲ್‌ಇ ಅವರಿಂದಿಲ್ಲಿ ಎಚ್ಚರಿಕೆ ನೀಡಿದರು.

Home add -Advt


ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ಎಲ್ಲ ಅಂಗಾAಗ ಕಸಿ ಮಾಡುವ ಕೇಂದ್ರವಾಗಿ ಗುರುತಿಸಿಕೊಂಡಿರುವ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ತಂತ್ರಜ್ಞಾನ ಬದಲಾದಂತೆ ವೈದ್ಯಕೀಯ ವ್ಯವಸ್ಥೆಯನ್ನು ಜನರಿಗೆ ತಲುಪಿಸಲಾಗುತ್ತಿದೆ. ಚಿಕ್ಕ ರಂದ್ರ ಮೂಲಕ ಕಿಡ್ನಿ ಕಸಿ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲು ಸದಾ ಒಂದು ಹೆಜ್ಜೆ ಮುಂದಿದೆ. ಕಿಡ್ನಿ ಕಸಿ ಮಾಡಿಸಿಕೊಂಡ ರೋಗಿಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಿ. ಎಂದ ಅವರು, ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ ಡಾಯಾಲಿಸಿಸ ಯಂತ್ರ ಹಾಗೂ ಕಿಡ್ನಿ ಸಂಬAಧಿತ ಸಕಲ ಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.


ಸಮಾರಂಭದಲ್ಲಿ ನೆಪ್ರೊಲಾಜಿಸ್ಟಗಳಾದ ಡಾ. ರಿತೇಶ ವೆರ್ನೆಕರ, ಡಾ. ರವಿ ಸಾರವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪೊಲೀಸರಿಗೆ ಉಚಿತ ತಪಾಸಣೆ: ನಗರದ ಸಶಸ್ತç ಮೀಸಲು ಪಡೆಯ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಸುಮಾರು ನೂರಕ್ಕೂ ಅಧಿಕ ಪೊಲೀಸರಿಗೆ ರಕ್ತ, ಕಿಡ್ನಿ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಕರಿಶೆಟ್ಟಿ ಅವರು ಉಪನ್ಯಾಸ ನೀಡಿದರು. ಪೊಲೀಸ್ ತರಬೇತಿ ಶಾಲೆಯ ಪ್ರಾಚರ‍್ಯರಾದ ಕೆ ಎಂ ಮಹದೇವಪ್ರಸಾದ, ಉಪಪ್ರಾಚರ‍್ಯರಾದ ಆಶಿಷ್ ಮೇಘನ್ನವರ ಪಿಎಸ್ಐ ದಯಾನಂದ ರಡ್ಡೇರಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Back to top button