Belagavi NewsBelgaum NewsKarnataka NewsLatest

*ಬೆಳಗಾವಿ ನಗರಕ್ಕೆ ಗಾಂಜಾ ಸಪ್ಲೈ ಮಾಡುತ್ತಿದ್ದ ಕಿಂಗ್ ಪಿನ್ ಆ್ಯಂಡ್ ಟೀಮ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಡೀ ಬೆಳಗಾವಿ ನಗರಕ್ಕೆ ಗಾಂಜಾ ಸಪ್ಲೈ ಮಾಡುತ್ತಿದ್ದ ಮಾಸ್ಟರ್ ಮೈಂಡ್ ಹಾಗೂ ಗ್ಯಾಂಗ್ ಅನ್ನು ಪತ್ತೆ ಹಚ್ಚಿ ಬೆಳಗಾವಿ ಪೊಲೀಸರು ಜೈಲಿಗೆ ಹಾಕಿದ್ದಾರೆ.‌

ಜೂನ್ ನಲ್ಲಿ ತಿಂಗಳಲ್ಲಿ ಗಾಂಜಾ ಮಾರಾಟ ಮಾಡುವ ವೇಳೆ ಬೆಳಗಾವಿ ಜಿಲ್ಲೆಯ ತಾಜೀಬ ಅಬ್ದುಲ್‌ ರಜಾಕ ಮುಲ್ಲಾ ಹಾಗೂ ಅನುರಾಗ ಉದಯಕುಮಾರ ಯರಳಾನಕರ ಎಂಬುವರನ್ನು ಅರೆಸ್ಟ್ ಮಾಡಿ ಅರಿಂದ 5.562 ಕೆಜಿ ಗಾಂಜಾ, ಮೋಬೈಲ್ ಹಾಗೂ ಬೈಕ್ ವಶಪಡಿಕೊಳ್ಳಾಗಿತ್ತು. ಈ ಪ್ರಕರಣವನ್ನು ಮತ್ತಷ್ಟು ಕೆದಕಿದ ಬೆಳಗಾವಿ ಖಾಕಿ ಪಡೆ ಕಿಂಗ್ ಪಿನ್ ಸದ್ದಾಂ @ ಇಸ್ಮಾಯಿಲ್ ಸಯ್ಯದ  ಮತ್ತು ತಾಜೀರ ಬಸ್ತವಾಡ ಇವರನ್ನು ಪತ್ತೆ ಹಚ್ಚಲು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮುಂಬೈಗೆ ಹೋಗಿದೆ.  ಈ ವೇಳೆ ಬೆಳಗಾವಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ  ಸದ್ದಾಂ @ ಇಸ್ಮಾಯಿಲ್ ಸಯ್ಯದ ಇತನ ಮಾವನಾದ ಅಬ್ದುಲಮಜೀದ ಅಬ್ದುಲಸತ್ಕಾರ ಮುಖಾದಮ ಸಿಕ್ಕಿಬಿಳುತ್ತಾನೆ. ಇತನ ಮನೆಯಿಂದ 2 ಕೆಜಿ 16 ಗ್ರಾಂ ಕುಡಾ ಪತ್ತೆ ಆಗುತ್ತೆ. ಈ ವೇಳೆ ಮುಖ್ಯ ಆರೋಪಿಯ ಮಾವನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಪೊಲೀಸರು ಕಳುಹಿಸುತ್ತಾರೆ. 

ಬಳಿಕ ಆಗಷ್ಟ್ 21 ರಂದು ಈ ಇಸ್ಮಾಯಿಲ್ @ ಸದ್ದಾಂ ಬಾಬು ಸಯ್ಯದ ಮತ್ತು ತಾಜೀರ್ ಗುಡುಸಾಬ ಬಸ್ತವಾಡೆ ಇವರು 2 ಕಾರಗಳಲ್ಲಿ ಚಂದಗಡ ಕಡೆಯಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ತಮ್ಮ ಮಾವನನ್ನು ಭೇಟಿ ಮಾಡಲು ಬಂದಿದ್ದಾನೆ ಎಂಬ ಖಚಿತ ಮಾಹಿತಿ ಮಾಹಿತಿ ಬಂದಿದ್ದರಿಂದ ಪಿಐ ಬಿ ಆರ್ ಗಡ್ಡಕರ ರವರು ತಮ್ಮ ಸಿಬ್ಬಂದಿ ಜನರೊಂದಿಗೆ ಸುಳಗಾ ಗ್ರಾಮದ ಬಳಿಯ ಚಂದಗಡ ಬೆಳಗಾವಿ ರಸ್ತೆ ಸೇಮ್ ಪ್ಲೇಸ್ ದಾಬಾದ ಸಮೀಪ ಹಿಡಿದುಕೊಂಡು ತಪಾಸಣೆ ಮಾಡಿದಾಗ ಈ ಇಬ್ಬರು ಆರೋಪಿಗಳ ಜೊತೆ ಗಾಂಜಾ ಪಡ್ಲರ್ ಗಳಾದ ಪ್ರಥಮೇಶ ದಿಲೀಪ ಲಾಡ್ , ತೇಜಸ್ ಭೀಮರಾವ್ ವಾಜರ, ಶಿವಕುಮಾರ ಬಾಳಕೃಷ್ಣ ಆಸಬೆ, ರಮಜಾನ್ ದಸ್ತಗೀರ ಜಮಾದಾರ, ಎಂಬುವರು ಕೂಡಾ ಲಾಕ್ ಆಗಿದ್ದಾರೆ.‌

ಆರೋಪಿಗಳು ಅರೆಷ್ಟ್ ಆದ ವೇಳೆ  ವಾಹನಗಳಲ್ಲಿ ಇದ್ದ 42 ಕೆಜಿ 730ಗ್ರಾಂ ಗಾಂಜಾ, ಡಿಜಿಟಲ್ ಹ್ಯಾಂಗರ್ ತಕ್ಕಡಿ ಎರಡು ಕಾರು, ಮಾರಕಾಸ್ತ್ರಗಳು 4500 ಹಣ, 10 ಮೊಬೈಲಗಳು, ಸರ್ಜಿಕಲ್ ಬ್ರೇಡ್ ವಶಕ್ಕೆ ಪಡೆದಿದ್ದಾರೆ. 

Home add -Advt

ಈ ಪ್ರಕರಣದಲ್ಲಿ ದಸ್ತಗೀರಿಯಾದ ಸದ್ದಾಂ @ ಇಸ್ಮಾಯಿಲ್ ಸಯ್ಯದ ತನ್ನ ಸಹಚರರೊಡನೆ ಮದ್ಯಪ್ರದೇಶದಿಂದ ಗಾಂಜಾವನ್ನು ಖರೀದಿ ಮಾಡಿಕೊಂಡು ಬೆಳಗಾವಿ ನಗರ ಮತ್ತು ಬೆಳಗಾವಿ ಜಿಲ್ಲೆ, ಹುಬ್ಬಳ್ಳಿ ಧಾರವಾಡ, ಅಲ್ಲದೆ ಬೆಂಗಳೂರು ಮತ್ತು ಪಕ್ಕದ ರಾಜ್ಯ ಗೋವಾದಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ

ಸದ್ದಾಂ @ ಇಸ್ಮಾಯಿಲ್ ಇವನಿಗೆ ನಗರದಲ್ಲಿ ಹಲವಾರು ಪ್ರಕರಣಗಳು ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ, ಮಹಾರಾಷ್ಟ್ರ ರಾಜ್ಯದ ಪೂನಾ ನಗರದಲ್ಲಿ ಪ್ರಕರಣ ದಾಖಲಾಗಿರುತ್ತವೆ.

ಈ ಪ್ರಕರಣದಲ್ಲಿ ಇಲ್ಲಿಯವರೆಗೆ 9 ಜನ ಆರೋಪಿತರನ್ನು ಬಂಧಿಸಿ, ಅವರಿಂದ 50 ಕೆಜಿ 452 ಗ್ರಾಂ ಗಾಂಜಾ, 13 ಮೊಬೈಲ್, 2 ಕಾರ, 1 ಮೋಟರ ಸೈಕಲ್, ಹಾಗೂ ಇತರೇ 11 ವಸ್ತುಗಳನ್ನು ಜಪ್ತ ಮಾಡಿದ್ದು ಇರುತ್ತದೆ. ಸದರಿ ಜಪ್ತು ಮಾಡಲಾದ ಮಾದಕ ವಸ್ತು ವಾಹನಗಳ ಅಂಧಾಜು ಮೌಲ್ಯ ರೂ.30 ಲಕ್ಷ ಗಳಾಗಿದೆ. 

Related Articles

Back to top button