
ಸಂತ್ರಸ್ತರ ಆಶ್ರಯ ಕೇಂದ್ರಗಳಿಗೆ ಕಿರಣ ಜಾಧವ ಭೇಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಮಹಾನಗರ ಆತಿವೃಷ್ಠಿಯಿಂದ ಬಹುತೇಕ ಮುಳುಗಿಹೋಗಿದೆ. 2-3 ದಿನದಿಂದ ಮಳೆ ಕಡಿಮೆಯಾಗಿದ್ದರಿಂದ ನೀರಿನ ಪ್ರಮಾಣ ನಿಧಾನವಾಗಿ ತಗ್ಗುತ್ತಿದೆ. ಆದರೂ ಸಂತ್ರಸ್ತರು ಮನೆಗಳಿಗೆ ಮರಳುವ ಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಹಾಗಾಗಿ ಪರಿಹಾರ ಕೇಂದ್ರಗಳಲ್ಲಿ ಸಾವಿರಾರು ಜನ ಅಶ್ರಯ ಪಡೆದಿದ್ದಾರೆ.
ಬೆಳಗಾವಿ ನಗರದಲ್ಲಿರುವ ಪ್ರವಾಹ ಸಂತ್ರಸ್ತರ ಆಶ್ರಯ ಕೇಂದ್ರಗಳಿಗೆ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ತಮ್ಮ ತಂಡದೊಂದಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಸಂತ್ರಸ್ತರ ಅಹವಾಲು ಆಲಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ.
ಸಂತ್ರಸ್ತರಿಗೆ ತುರ್ತಾಗಿ ಆಗಬೇಕಾದ ಕೆಲಸಗಳನ್ನು ತಮ್ಮ ತಂಡದ ಮೂಲಕ ಅವರು ಮಾಡಿಕೊಡುತ್ತಿದ್ದಾರೆ. ಅನೇಕ ಕಡೆ ಸಾಮಗ್ರಿಗಳನ್ನು ಸಹ ವಿತರಿಸುತ್ತಿದ್ದಾರೆ.
ಹಾಗೆಯೇ, ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರನ್ನು, ಮನೆಗಳನ್ನು ಕಳೆದುಕೊಂಡವರನ್ನು ಭೇಟಿ ಮಾಡಿ ಸಂತೈಸುತ್ತಿದ್ದಾರೆ.
ಆಸ್ಪತ್ರೆಗೆ ಸುರೇಶ ಅಂಗಡಿ ಭೇಟಿ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇಂದು ಬೆಳಗ್ಗೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪ್ರವಾಹದಿಂದಾಗಿ ಅನಾರೋಗ್ಯಕ್ಕೀಡಾದವರ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ ವೈದ್ಯರಿಂದ ರೋಗಿಗಳ ಸ್ಥಿತಿ ಹಾಗೂ ಔಷಧೋಪಚಾರದ ಮಾಹಿತಿ ಪಡೆದರು.
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ, ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ಸಹ ಜೊತೆಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ