Latest

ಸರ್ಕಾರಿ ಬಾಲಮಂದಿರದಿಂದ ಬಾಲಕ ನಾಪತ್ತೆ: ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ಪಟ್ಟಣದ ಸರ್ಕಾರಿ ಬಾಲಕರ ಬಾಲಮಂದಿರದ ನಿಲಯಾರ್ಥಿ ಇರ್ಫಾನ್ ಫಿರೋಜ್ ಕಿಲ್ಲೇದಾರ (೧೪) ಎಂಬ ಬಾಲಕ ಕಾಣೆಯಾಗಿದ್ದಾನೆ ಎಂದು ಬಾಲಮಂದಿರದ ಅಧೀಕ್ಷಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏ.೧೦ರಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದ ಬಾಲಕ ಮರಳಿ ಬಂದಿಲ್ಲ. ಈತ ಮೂಲತಃ ಅಥಣಿ ತಾಲೂಕು ತಂಗಡಿ ಗ್ರಾಮದವನಾಗಿದ್ದು, ದುಂಡು ಮುಖ, ಸದೃಡ ಮೈಕಟ್ಟು ಹೊಂದಿದ್ದಾನೆ. ಕನ್ನಡ ಭಾಷೆಯನ್ನು ಬಲ್ಲವನಾಗಿದ್ದು, ಜೀನ್ಸ್ ಪ್ಯಾಂಟ್, ಬಿಳಿ ಬಣ್ಣದ ಶರ್ಟ್ ಧರಿಸಿದ್ದಾನೆ. ಈತನ ಬಗ್ಗೆ ಸುಳಿವುಗಳು ದೊರೆತಲ್ಲಿ ಪಟ್ಟಣದ ಪೊಲೀಸ್ ಠಾಣೆಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ ೦೮೩೩೬ ೨೨೨೩೩೩, ಮೊಬೈಲ್ ೯೪೮೦೮೦೪೦೮೬ ಮೂಲಕ ಸಂಪರ್ಕಿಸಲು ಖಾನಾಪುರ ಠಾಣೆಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button