Film & EntertainmentKarnataka NewsLatest

*ಖ್ಯಾತ ಡಾನ್ಸರ್ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ನವಿಲುಗರಿ ಉಡುಪು ಧರಿಸಿ ರೀಲ್ಸ್ ವಿಡಿಯೋ ಮಾಡಿದ್ದ ಖ್ಯಾತ ಡಾನ್ಸರ್ ಕಿಶನ್ ಬೆಳಗಲಿ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಡಾನ್ಸರ್ ಕಿಶನ್ ಬೆಳಗಲಿ ಖ್ಯಾತ ನಟಿಯರೊಂದಿಗೆ ನೃತ್ಯ, ಹಾಗೂ ಡಾನ್ಸ್ ರೀಲ್ಸ್ ಗಳ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಅದೇ ರೀತಿ ಕೆಲ ದಿನಗಳ ಹಿಂದೆ ಕಿಶನ್ ಬೆಳಗಲಿ ಹಾಗೂ ನಿವೇದಿತಾ ಅವರು ನವಿಲುಗರಿ ಉಡುಪು ಧರಿಸಿ ಮಾಡಿದ್ದ ರೀಲ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿತ್ತು. ರ್ವಿಚಂದ್ರನ್ ಅಭಿನಯದ ಕಲಾವಿದ ಸಿನಿಮಾದ ನವಿಲೇ, ನವಿಲೇ ಹಾಡಿಗೆ ನವಿಲುಗರಿ ಉಡುಪು ಧರಿಸಿ ರೀಲ್ಸ್ ಮಾಡಿದ್ದರು. ಈ ವಿಡಿಯೋಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ನವಿಲುಗರಿ ಬಳಸಿದ್ದಕ್ಕಾಗಿ ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ರೀಲ್ಸ್ ವಿಡಿಯೋದಲ್ಲಿ ಧರಿಸಿದ್ದ ನವಿಲುಗರಿ ನೈಜವಾಗಿರುವುದೇ? ಅಥವಾ ಕೃತಕ ನವಿಲುಗರಿಯೇ? ಎಂಬುದನ್ನು ತನಿಖೆ ನಡೆಸುವಂತೆ, ನೈಜ ನವಿಲುಗರಿಗಳಾಗಿದ್ದರೆ ಅವುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button