Latest

ಕೊಟ್ಟ ಮಾತಿನಂತೆ ಆರ್ಥಿಕ ನೆರವು ನೀಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರಿಂದ ಆಶ್ರಯ ಫೌಂಡೇಶನಗೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಲಾಯಿತು.

ಮಹಾಂತೇಶ್ ದೊಡ್ಡಗೌಡರ್ ತಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರಾದ ಶಾಮ್ ಸುಂದರ ಶಿಳ್ಳೆದಾರ ಕುಟುಂಬ, ಮಲ್ಲಿಕಾರ್ಜುನ್ ಅವರೊಂದಿಗೆ ಆಶ್ರಯ ಫೌಂಡೇಶನ್ ಗೆ ಭೇಟಿ ನೀಡಿ ಸಹಾಯಧನ ವಿತರಿಸಿದರು.

Home add -Advt

ಕಳೆದ ತಿಂಗಳು ಕಿತ್ತೂರಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾಂತೇಶ್ ದೊಡ್ಡ ಗೌಡರು, ಆಶ್ರಯ ಫೌಂಡೇಶನ್ ಗೆ ಬರುತ್ತೇನೆ ಹಾಗೂ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈದಿನ ಕೊಟ್ಟ ಭರವಸೆಯಂತೆ ನಡೆದುಕೊಂಡ ಶಾಸಕರು ಆರ್ಥಿಕ ನೆರವು ನೀಡಿದ್ದಾರೆ.

ಗಣಪತಿಯ ಹಬ್ಬದ ನಿಮಿತ್ತ ಹಾಗೂ ಅವರ ಹುಟ್ಟು ಹಬ್ಬ ನಾಳೆ ದಿನ ಇದ್ದ ಕಾರಣ ಆಶ್ರಯ ಫೌಂಡೇಶನ್ ಗೆ ಭೇಟಿ ನೀಡಿ ಆಶ್ರಯ ಫೌಂಡೇಶನ್ ಗೆ ಒಂದು ಲಕ್ಷ ರೂಪಾಯಿ ನೀಡಿ ಆರ್ಥಿಕ ಸಹಾಯ ಮಾಡಿದರು ಹಾಗೂ ಆಶ್ರಯ ಮಕ್ಕಳಿಂದ ಮಾಡಲಾದ ಪರಿಸರ ಸ್ನೇಹಿ ಗಣಪತಿಗೆ ಆರತಿ ಮಾಡಿದರು ಹಾಗೂ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಆಶ್ರಯ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿಕೊಂಡರು.

ಆಶ್ರಯ ಫೌಂಡೇಶನ್ ವತಿಯಿಂದ ಶಾಸಕರಿಗೆ ಅವರ ಕುಟುಂಬದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಆಶ್ರಯ ಫೌಂಡೇಶನ್ ನ ಪದಾಧಿಕಾರಿಗಳಾದ ನಾಗರತ್ನ ಅರ್ಚನಾ, ಬಸವರಾಜ್ ಬಾಗೋಜಿ,ಜಗದೀಶ್ ಬಡಿಗೇರ್, ಮಲ್ಲನಗೌಡ ಪಾಟೀಲ್ ಮತ್ತು ಅವರ ಸ್ನೇಹಿತ. ಯುವ ಸ್ವಯಂಸೇವಕರಾದ ರಾಹುಲ್, ಕುನಾಲ್, ಜ್ಞಾನೇಶ್, ಬಸವರಾಜ್. ಗಿರೀಶ್ ಪೂಜಾರಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಡಿಜೆಗೆ ಅವಕಾಶ ನೀಡದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ; ಪ್ರಮೋದ್ ಮುತಾಲಿಕ್ ಕರೆ

Related Articles

Back to top button