ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಇಲ್ಲಿನ ಮಲಪ್ರಭಾ ಮೈದಾನದಲ್ಲಿ ಖಾನಾಪುರದ ಯುವ ಸಮಿತಿ ಸಹಯೋಗದಲ್ಲಿ ನಿಯತಿ ಫೌಂಡೇಷನ್ ವತಿಯಿಂದ ಆಯೋಜಿಸಲಾದ ಕಿತ್ತೂರು ರಾಣಿ ಚನ್ನಮ್ಮ ಟ್ರೋಫಿ ಥ್ರೋ ಬಾಲ್ ಪಂದ್ಯಾವಳಿಗೆ ಫೌಂಡೇಷನ್ ನ ಮುಖ್ಯಸ್ಥೆ, ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಇಂದು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ “ಡಾ. ಸೋನಾಲಿ ಸರ್ನೋಬತ್, ನಿಯತಿ ಫೌಂಡೇಶನ್ ಯಾವಾಗಲೂ ಮಹಿಳಾ ಸಬಲೀಕರಣ ಮತ್ತು ಯುವ ಪ್ರೇರಣೆಯ ಕಾರ್ಯಗಳಿಗೆ ಒತ್ತು ನೀಡಿ ಮುನ್ನಡೆಯುತ್ತಿದೆ. ಇದು ಯುವಕರಲ್ಲಿ ಆತ್ಮಶಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಪ್ರತಿಜ್ಞೆ ಮಾಡುತ್ತದೆ” ಎಂದರು.
ಶ್ರೀ ಶಾಂಡಿಲ್ಯೇಶ್ವರ ಸ್ವಾಮೀಜಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಬಾಲಕಿಯರ 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ನಿಯತಿ ಫೌಂಡೇಶನ್ ಪ್ರಾಯೋಜಿತ, ಪ್ರಥಮ ಸ್ಥಾನ ಪಡೆದ ತಂಡಕ್ಕೆ 7001 ರೂ., ದ್ವಿತೀಯ 5000 ರೂ. ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 3000ರೂ. ನಗದು ಬಹುಮಾನ, ಭಾಗವಹಿಸಿದ ಎಲ್ಲ ಕ್ರೀಡಾಳುಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ಆನಂದ ಪಾಟೀಲ, ಬಾಳೇಶ ಚವಣ್ಣವರ, ಅನಿತಾ ಕೋಲಮಸ್ಕರ್, ಭೀಮಸೇನ ಅಗಸರ್, ಅನಸೂಯಾ ಅಗಸರ, ವಿಕಾಸ ವಡ್ಡರ ಉಪಸ್ಥಿತರಿದ್ದರು. ಡಾ. ಸೋನಾಲಿ ಸರ್ನೋಬತ್ ಕ್ರೀಡಾಳು ವಿದ್ಯಾರ್ಥಿನಿಯರೊಂದಿಗೆ ಸ್ವತಃ ಥ್ರೋಬಾಲ್ ಆಡಿ ಪ್ರೋತ್ಸಾಹಿಸಿದರು.
*ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ*
https://pragati.taskdun.com/h-d-kumaraswamyreactionravi-subrahmanya/
*ಸಿಎಂ ತವರು ಕ್ಷೇತ್ರದಲ್ಲೇ ಶಾಲಾ ಮಕ್ಕಳ ಪ್ರತಿಭಟನೆ; ರಸ್ತೆಯಲ್ಲೇ ಕುಳಿತು ಧರಣಿ*
https://pragati.taskdun.com/cm-basavaraj-bommaischool-studentsprotest-haaveri/
ನೀಟ್-ಪಿಜಿ ಪರೀಕ್ಷೆ ಮುಂದೂಡಿದ್ದು ನಿಜನಾ? ಆರೋಗ್ಯ ಸಚಿವಾಲಯ ಹೇಳಿದ್ದೇನು?
https://pragati.taskdun.com/is-it-true-that-neet-pg-exam-has-been-postponed-what-did-the-ministry-of-health-say/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ