ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ 23 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ.
ಅಕ್ಟೋಬರ್ 18 ರಂದು ಬೆಳಿಗ್ಗೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯು ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ.
ವೀರ ಜ್ಯೋತಿ ಯಾತ್ರೆಯ ವೇಳಾಪಟ್ಟಿ :
ಅಕ್ಟೋಬರ್ 18 (ಸೋಮವಾರ) ರಂದು ಬೆಳಿಗ್ಗೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯ ಮೆರವಣಿಗೆ ಆರಂಭಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಆನಿಗೋಳ ಗ್ರಾಮದಲ್ಲಿ ಜ್ಯೋತಿಯ ಸ್ವಾಗತ ಹಾಗೂ ಬಿಳ್ಕೋಡುಗೆ ಕಾರ್ಯಕ್ರಮ ನಡೆಯಲಿದೆ. ನಂತರ, ಬೆಳಿಗ್ಗೆ 10: 30 ಗಂಟೆಗೆ ಆನಿಗೋಳದಿಂದ – ಕೆಂಗಾನೂರ – ಗರ್ಜೂರ ಮಾರ್ಗವಾಗಿ ಸಂಗೊಳ್ಳಿಗೆ ಜ್ಯೋತಿ ತಲುಪಲಿದೆ.
ಮಧ್ಯಾಹ್ನ 2:30 ಗಂಟೆಗೆ ಸಂಗೊಳ್ಳಿಯಿಂದ ತುರಮರಿ- ಹುಣಶಿಕಟ್ಟಿ- ಇಟಗಿ ಕ್ರಾಸ್ ಮಾರ್ಗವಾಗಿ ಇಟಗಿಗೆ ಜ್ಯೋತಿ ತಲುಪಲಿದೆ. ಸಂಜೆ 4 ಗಂಟೆಗೆ ಇಟಗಿಯಿಂದ ಜ್ಯೋತಿಯ ಬೀಳ್ಕೊಡುಗೆ ನಡೆಯಲಿದೆ.
ಜ್ಯೋತಿಯು ಸಾಯಂಕಾಲ 6 ಗಂಟೆಗೆ ತೋಲಗಿ-ಬೇಕವಾಡ ಮಾರ್ಗವಾಗಿ ನಂದಗಡ ಗ್ರಾಮಕ್ಕೆ ಆಗಮಿಸಿ, ಸಾಯಂಕಾಲ 7:30 ಗಂಟೆಗೆ ಖಾನಾಪೂರ ತಲುಪಲಿದ್ದು, ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 19 ರಂದು ಬೆಳಿಗ್ಗೆ 9 ಗಂಟೆಗೆ ಖಾಪೂರದಿಂದ ಜ್ಯೋತಿಯನ್ನು ಬೀಳ್ಕೊಡಲಾಗುವುದು. ಬೆಳಿಗ್ಗೆ 11 ಗಂಟೆಗೆ
ಜ್ಯೋತಿಯು ಬೆಳಗಾವಿಗೆ ಆಗಮಿಸಲಿದ್ದು,ನಂತರ ಬೀಳ್ಕೊಡಲಾಗುವುದು. ಮಧ್ಯಾಹ್ನ 1 ಗಂಟೆಗೆ ಕಾಕತಿ ಹಾಗೂ ಮಧ್ಯಾಹ್ನ 2:30 ಗಂಟೆಗೆ ಹುಕ್ಕೇರಿಗೆ ಆಗಮಿಸಲಿದೆ. ಮಧ್ಯಾಹ್ನ 03.30 ಗಂಟೆಗೆ ಹುಕ್ಕೇರಿಯಿಂದ ತೆರಳಿ, ಸಾಯಂಕಾಲ 04.30 ಕ್ಕೆ ಸಂಕೇಶ್ವರ ಹಾಗೂ ಸಾಯಂಕಾಲ 7:30 ಕ್ಕೆ ನಿಪ್ಪಾಣಿಗೆ ಆಗಮಿಸಲಿದ್ದು, ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 20 ರಂದು ಬೆಳಿಗ್ಗೆ 9 ಗಂಟೆಗೆ ನಿಪ್ಪಾಣಿಯಿಂದ ಯಾತ್ರೆ ಪ್ರಾರಂಭಿಸಿ, 11 ಗಂಟೆಗೆ ಚಿಕ್ಕೋಡಿ ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ಕಾಗವಾಡಕ್ಕೆ ತಲುಪಲಿದೆ ಮತ್ತು ಸಾಯಂಕಾಲ 4 ಗಂಟೆಗೆ ಕಾಗವಾಡದಿಂದ ತೆರಳಿ, ಸಾಯಂಕಾಲ 7:30 ಕ್ಕೆ ಅಥಣಿ ತಲುಪಲಿದ್ದು, ಅಥಣಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 21 ರಂದು ಬೆಳಿಗ್ಗೆ 9 ಗಂಟೆಗೆ ಅಥಣಿಯಿಂದ ತೆರಳಿ, ಮಧ್ಯಾಹ್ನ 12 ಗಂಟೆಗೆ ರಾಯಬಾಗ ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ಕಂಕಣವಾಡಿ- ಗುರ್ಲಾಪೂರ ಕ್ರಾಸ್ ಮಾರ್ಗವಾಗಿ ಮೂಡಲಗಿ ತಲುಪಲಿದೆ. ನಂತರ, ಮಧ್ಯಾಹ್ನ 3:30 ಕ್ಕೆ ಮೂಡಲಗಿಯಿಂದ ತೆರಳಿ, ಸಾಯಂಕಾಲ 5 ಗಂಟೆಗೆ ಗೋಕಾಕ ತಲುಪಲಿದೆ. ಸಾಯಂಕಾಲ 7:30 ಕ್ಕೆ ಯರಗಟ್ಟಿಗೆ ಆಗಮಿಸಿ, ವಾಸ್ತವ್ಯವಿರಲಿದೆ.
ಅಕ್ಟೋಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಯರಗಟ್ಟಿಯಿಂದ ತೆರಳಿ, ಮಧ್ಯಾಹ್ನ 1 ಗಂಟೆಗೆ ಚಂದರಗಿ-ಗೊಡಚಿ ಮಾರ್ಗವಾಗಿ ರಾಮದುರ್ಗ ತಲುಪಲಿದೆ. ಮಧ್ಯಾಹ್ನ 1:30 ಕ್ಕೆ ರಾಮದುರ್ಗದಿಂದ ತೆರಳಿ, 2:30 ಕ್ಕೆ ಸವದತ್ತಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ಸವದತ್ತಿಯಿಂದ ತೆರಳಿ, ಸಾಯಂಕಾಲ 4:30 ಕ್ಕೆ ಬೆಳವಡಿ ತಲುಪಲಿದೆ.
ನಂತರ, ಸಾಯಂಕಾಲ 9 ಗಂಟೆಗೆ ಖೋದಾನಪೂರ-ಪಟ್ಟಿಹಾಳ ಕೆ.ಬಿ.-ಇಟಗಿ ಕ್ರಾಸ್- ಮಲಪ್ರಭಾ ಸಕ್ಕರೆ ಕಾರ್ಖಾನೆ- ಎಂ.ಕೆ.ಹುಬ್ಬಳ್ಳಿ-ದಾಸ್ತಿಕೊಪ್ಪ ಮಾರ್ಗವಾಗಿ ಕಿತ್ತೂರಿನ ಸೈನಿಕ ಶಾಲೆಯಲ್ಲಿ ವಾಸ್ತವ್ಯವಿರಲಿದೆ.
ಅಕ್ಟೋಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಕಿತ್ತೂರಿನ ಸೈನಿಕ ಶಾಲೆಯಿಂದ ತೆರಳಿ, 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಜ್ಯೋತಿ ಉಪಸಮಿತಿಯ ಅಧ್ಯಕ್ಷರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.
ಶನಿವಾರ, ಭಾನುವಾರವೂ ಶಾಲೆ ?; ಪಠ್ಯ ಕಡಿತ ಪ್ರಸ್ತಾಪವಾಗಿಲ್ಲ – ಸಚಿವ ನಾಗೇಶ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ