ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇದೇ ಅಕ್ಟೋಬರ್ 23 ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಕಿತ್ತೂರು ಉತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ರಾಜ್ಯದಾದ್ಯಂತ ವೀರಜ್ಯೋತಿ ಯಾತ್ರೆಯು ಆರಂಭಗೊಂಡಿದೆ.
ಬೆಂಗಳೂರಿನಿಂದ ಜ್ಯೋತಿಯಾತ್ರೆ ಆರಂಭಗೊಂಡಿದ್ದು, ಅ.3ರಂದು ಮಧ್ಯಾಹ್ನ 2:15 ಘಂಟೆಗೆ ರಾಮನಗರದಲ್ಲಿ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯನಿರ್ವಹನಾಧಿಕಾರಿ, ಜಿಲ್ಲಾ ಪಂಚಾಯತ್ ಹಾಗೂ ಮಾನ್ಯ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿಗಳು ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ / ಸಿಬ್ಬಂದಿಗಳು ಚನ್ನಮ್ಮಾ ಜ್ಯೋತಿಯನ್ನು ವಾದ್ಯ ಮೇಳಗಳೋಂದಿಗೆ ಸ್ವಾಗತಿಸಿ, ಜ್ಯೋತಿಗೆ ಪೂಜೆ ಸಲ್ಲಿಸಿ, ಬೀಳ್ಕೊಟ್ಟರು.
ಇದಾದನಂತರ ಯಾತ್ರೆಯು ಮಂಡ್ಯ ಜಿಲ್ಲೆಗೆ ಪ್ರಯಾಣ ಬೆಳೆಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2ರಂದು ವೀರಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು. ಅ.23 ರಂದು ಯಾತ್ರೆಯು ಚೆನ್ನಮ್ಮನ ಕಿತ್ತೂರಿಗೆ ಆಗಮಿಸಲಿದೆ.
ಎಲ್ಲಾ ಭಾಗ್ಯ ನಮ್ದೇ ಎಂದ ಸಿದ್ದರಾಮಯ್ಯ; ‘PFI ಭಾಗ್ಯ’ ಪೋಸ್ಟರ್ ಬೀಡುಗಡೆ ಮಾಡಿ ಟಾಂಗ್ ನೀಡಿದ ಆರ್.ಅಶೋಕ್
https://pragati.taskdun.com/politics/pfi-bhagyaposter-releaser-ashoksiddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ