ಪ್ರಗತಿವಾಹಿನಿ ಸುದ್ದಿ; ಕಿತ್ತೂರು: ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಹೆಚ್ಚೆಚ್ಚು ಬಳಸುವುದರಿಂದ ನಮ್ಮ ಕನ್ನಡ ಹೆಚ್ಚು ಬೆಳೆಯುತ್ತದೆ ಎಂದು ಲೇಖಕ ಪ್ರವೀಣ ಗಿರಿ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಂದಿನ ಜನಾಂಗ ಇಂಗ್ಲೀಷ್ ಭಾಷೆಯ ಹಿಂದೆ ಬಿದ್ದಿದೆ ಇದು ನಿಲ್ಲಬೇಕಿದೆ. ನಮ್ಮ ಭಾಷೆಯನ್ನು ಪ್ರೀತಿಸಬೇಕು, ಇತರ ಭಾಷೆಯನ್ನು ಗೌರವಿಸುವ ಮನೋಭಾವ ಬೆಳೆಸುವ ಅವಶ್ಯಕತೆ ಇದೆ ಎಂದರು.
ಮೇಜರ್ ಮೋಹನ್ ಅಂಗಡಿ ಹಾಗೂ ಉಪನ್ಯಾಸಕ ಜಗದೀಶ ಮಾಳಗಿ ಮಾತನಾಡಿ, ಕನ್ನಡ ಕಟ್ಟುವ ಕೆಲಸಕ್ಕೆ ಇಂದಿನ ಯುವ ಜನಾಂಗ ಕೈ ಜೋಡಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಯುವಕರು ಚಿಂತಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರದೀಪ ಚನ್ನಣ್ಣನವರ, ವೇದಾಂತ ಸೇರಿದಂತೆ ಇತರರು ಇದ್ದರು. ನಂತರ ಪಟ್ಟಣದ ಚನ್ನಮ್ಮ ವೃತ್ತದಿಂದ ಕುಲವಳ್ಳಿ ಗ್ರಾಮದವರೆಗೆ ಸೈಕಲ್ ಜಾಥಾ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ