Belagavi NewsBelgaum NewsKannada NewsKarnataka NewsLatest

*ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ; ಭವಿಷ್ಯ ನುಡಿದ ಜೈನ ಮುನಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಆರಂಭವಾಗಿದ್ದ ಚರ್ಚೆ ಕೊಂಚ ತಣ್ಣಗಾಗಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜೈನ ಮುನಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಬೆಳಗಾವಿ ಜಿಲ್ಲೆ ಹಲಗಾದ ಜೈನ ಬಸಿದಿಯ ಪ.ಪೂ.ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಲೋಕಸಭಾ ಚುನಾವಣೆ ಬಳಿಕ ವಿನಯ್ ಕುಲಕರ್ಣಿ ಸಚಿವರಾಗಲಿದ್ದರೆ ಎಂದು ಕೂಡ ಹೇಳಿದ್ದಾರೆ. ವಿನಯ್ ಕುಲಕರ್ಣಿ ಹಲಗಾ ಜೈನ ಬಸಿದಿಗೆ ಭೇಟಿ ನೀಡಿದ್ದರು. ಈ ವೇಳೆ ಜೈನ ಮುನಿ ಸಿದ್ದಸೇನ ಮಹಾರಾಜರು ನೀವು ಸಚಿವರಾಗುತ್ತೀರಿ. ಧಾರವಾಡ ಜಿಲ್ಲೆಯ ಉಸ್ತುವಾರಿ ಆಗುತ್ತೀರಿ ಎಂದು ಆಶಿರ್ವಾದ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೂ ಆಶಿರ್ವಾದ ಕೊಟ್ಟಿದ್ದೇನೆ. ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

Home add -Advt


Related Articles

Back to top button