*ಕೆ.ಎಲ್.ಇ ಆಸ್ಪತ್ರೆ ವೈದ್ಯರ ಮತ್ತೊಂದು ಸಾಧನೆ: ಮಧುಮೇಹ ಪೀಡಿತ ರೋಗಿಗೆ ಮೆರಿಲ್ ಮೆಸನ್ ಇಂಟ್ರಾವ್ಯಾಸ್ಕುಲರ್ ಲಿಥೋಟ್ರಿಪ್ಸಿ ಚಿಕಿತ್ಸೆ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಮಧುಮೇಹ ಪೀಡಿತಗೊಂಡು ಮೊಣಕಾಲಿನ ಕೆಳಗೆ ರಕ್ತನಾಳದಲ್ಲಿ ಉಂಟಾದ ತೊಂದರೆ (ಡಯಾಬಿಟಿಕ್ ಫೂಟ್ / ಪಿವಿಡಿ ಖಾಯಿಲೆ) ಯಿಂದ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ಗಾಯ ಹಾಗೂ ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಅತ್ಯಾಧುನಿಕ ಮೆರಿಲ್ ಮೆಸನ್ ಇಂಟ್ರಾವ್ಯಾಸ್ಕುಲರ್ ಲಿಥೋಟ್ರಿಪ್ಸಿ ತಂತ್ರಜ್ಞಾನದ ಮೂಲಕ ಯಶಸ್ವಿ ಚಿಕಿತ್ಸಾ ಪ್ರಕ್ರಿಯೆ ನಡೆಸಿ ಕಾಲು ತುಂಡರಿ(ಕತ್ತರಿ)ಸುವದನ್ನು ಉಳಿಸುವಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನ್ಯುರೋ ಹಾಗೂ ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ವಿಭಾಗದ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
ಗೋಕಾಕ ತಾಲೂಕಿನ 58 ವರ್ಷ ಹಾಗೂ ಬೆಳಗಾವಿಯ ಮೂಲದ 55 ವರ್ಷದ ವ್ಯಕ್ತಿಯು ಟೈಪ್ 2 ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ವ್ಯಕ್ತಿಯ ಕಾಲಿನಲ್ಲಿನ ರಕ್ತ ಸಂಚಾರ ಸ್ಥಗಿತಗೊಂಡು, ತೀವ್ರವಾದ ನೋವು ಹಾಗೂ ಗಾಯಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರಿಗೆ ಕಾಲಿನ ಎಂಜಿಯೊಪ್ಲಾಸ್ಟಿ ಮಾಡಿದರೂ ಈ ತೊಂದರೆ ನಿವಾರಣೆಯಾಗಿರಲಿಲ್ಲ.
ಆದ್ದರಿಂದ, ರೋಗಿಯು ತೀವ್ರತರವಾದ ನೋವಿನಿಂದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿದರು. ಇಲ್ಲಿಯ ವೈದ್ಯರು ರೋಗಿಯನ್ನು ತೀವ್ರತರವಾದ ತಪಾಸಣೆಗೂಳಪಡಿಸಿದಾಗ ಅವರ ಕಾಲಿನಲ್ಲಿ ಕ್ಯಾಲ್ಸಿಫೈಡ್ ರಕ್ತನಾಳಗಳು ಕಂಡು ಬಂದವು. ಕ್ಯಾಲ್ಸಿಫೈಡ್ ರಕ್ತನಾಳಗಳ ಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲೇ ತೀವ್ರ ಸವಾಲನ್ನೋಡ್ಡುವ ಪ್ರಕ್ರಿಯೆಯಾದ್ದರಿಂದ ಅತ್ಯಾಧುನಿಕ ನೂತನ ತಂತ್ರಜ್ಞಾನವಾದ ಇಂಟ್ರಾವಾಸ್ಕುಲರ್ ಲಿಥೊಟ್ರಿಪ್ಸಿ (ಐವಿಎಲ್) ಮೂಲಕ ರಕ್ತ ಸಂಚಾರವನ್ನು ಸುಗಮಗೊಳಿಸಲಾಯಿತು.
ಈ ಚಿಕಿತ್ಸಾ ಪ್ರಕ್ರಿಯೆ ನೆರವೇರಿಸಲು ಮೆರಿಲ್ ಮೆಸನ್ ಲಿಥೋಟ್ರಪ್ಸಿ ಸಾಧನ ಬಳಸಲಾಗಿದೆ. ಈ ಅತ್ಯಾಧುನಿಕ ಉಪಕರಣವು ವಿಶೇಷ ಲಿಥೊಟ್ರಿಪ್ಸಿ ಬಲೂನ್ ಕ್ಯಾತೆಟರ್ ಮೂಲಕ ರಕ್ತನಾಳಗಳಲ್ಲಿನ ಗಟ್ಟಿಯಾದ ಕ್ಯಾಲ್ಸಿಯಂ ಅಂಶವನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಒಡೆಯುತ್ತದೆ. ಈ ಪ್ರಕ್ರಿಯೆಯಿಂದ ರಕ್ತನಾಳಗಳಲ್ಲಿನ ಸಂಚಾರ ಸುಧಾರಿತಗೊಂಡು, ಗಾಯಗಳನ್ನು ಕಡಿಮೆ ಮಾಡುತ್ತದೆ. ಅತ್ಯಂತ ಕಡಿಮೆ ನೋವಿನ ಹಾಗು ಪರಿಣಾಮಕಾರಿಯಾದ ಈ ವಿಧಾನವು ಶೀಘ್ರ ಚೇತರಿಕೆ ಹಾಗೂ ಕಾಲುಗಳನ್ನು ಉಳಿಸುವಲ್ಲಿ ಸಹಕಾರಿಯಾಗಿದೆ. ಕ್ಯಾಲ್ಸಿಫೈಡ್ ರಕ್ತನಾಳಗಳ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನಮ್ಮ ದೇಶದಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಪ್ರಪ್ರಥಮ ಆಸ್ಪತ್ರೆ ಇದಾಗಿದ್ದು, ಗುಣಮಟ್ಟದ ಚಿಕಿತ್ಸೆ ನೀಡುವ ಬದ್ದತೆಯನ್ನು ಎತ್ತಿಹಿಡಿಯುತ್ತದೆ. ಇದರಿಂದಾಗಿ ಈ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುತ್ತಿವೆ. ರಕ್ತನಾಳಗಳ ಚಿಕಿತ್ಸೆಯಲ್ಲಿ ಆಸ್ಪತ್ರೆಯ ನ್ಯುರೋ ಹಾಗು ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ವಿಭಾಗವು ರಾಜ್ಯದಲ್ಲಿ ಸದಾ ಮುಂಚೊಣಿಯಲ್ಲಿದೆ.
ಈ ಚಿಕಿತ್ಸಾ ಪ್ರಕ್ರಿಯೆಯನ್ನು ನ್ಯುರೋ ಹಾಗು ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ತಜ್ಞವೈದ್ಯರಾದ ಡಾ. ಅಭಿನಂದನ್ ರೂಗೆ, ಡಾ. ಅಭಿಮಾನ್ ಬಾಲೋಜಿ ಅವರು ಯಶಸ್ವಿಯಾಗಿ ನೆರವೇರಿಸಿದರು. ಡಾ. ನವೀನ್ ಮೂಲಿಮನಿ, ಡಾ. ಈರಣ್ಣ ಎಂ. ಹಿತ್ತಲಮನಿ, ಡಾ. ಬಸವರಾಜ್ ಬಿರಾದಾರ್ ಅವರು ಚಿಕಿತ್ಸಾ ಪ್ರಕ್ರಿಯೆಗೆ ಸಹಕರಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ನ್ಯುರೋ ಹಾಗೂ ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ತಜ್ಞವೈದ್ಯರಾದ ಡಾ. ಅಭಿನಂದನ್ ರೂಗೆ, ಡಾ. ಅಭಿಮಾನ್ ಬಾಲೋಜಿ, ಡಾ. ನವೀನ್ ಮೂಲಿಮನಿ, ಡಾ. ಈರಣ್ಣ ಎಂ. ಹಿತ್ತಲಮನಿ, ಡಾ. ಬಸವರಾಜ್ ಬಿರಾದಾರ್ ಅವರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
Historic First in India: Below-Knee Lithotripsy for Peripheral Vascular Disease Performed at KLES Dr. Prabhakar Kore Hospital
Belagavi witnessed a groundbreaking medical milestone as the Department of Neuro and Vascular Interventional Radiology at KLES Dr. Prabhakar Kore Hospital and Medical Research Centre successfully performed the first-ever below-knee lithotripsy for peripheral vascular disease (PVD) in India. This pioneering procedure, carried out using the advanced Meril Mason P lithotripsy device, marks a significant advancement in vascular intervention in the country.
The innovative procedure was performed by Dr. Abhinandan Ruge, MD, FVIR, and Dr. Abhiman Baloji, MD, DM, supported by a team of renowned consultants including Dr. Navin Mulimani, MD, DM, Dr. Iranna M. Hittalamani, MD, FVIR, and Dr. Basavaraj Biradar, MD, DM. The experienced team also included several residents Dr. Satyam Barchha MD, Dr. Priyanka SV MD, Dr. Harsh Singh MD, Dr. Vijay Sooriyakumar MD, Dr. Goutham Reddy MD, Dr. Aakarsh Sinha MD, ensuring a collaborative approach to this landmark intervention.
Peripheral vascular disease, which affects blood circulation in the limbs, often leads to severe complications such as rest pain, ulcers, and even the risk of limb loss if untreated. The patients involved in these cases had significant clinical histories, including type 2 diabetes mellitus (T2DM), hypertension, cerebrovascular accident (CVA), and prior angioplasty, making the successful outcome even more noteworthy.
The first case involved a 68-year-old man with T2DM, hypertension, and a history of CVA, who presented with rest pain and a non-healing ulcer in the interdigital webspace of his left foot for over one month. Despite being on single antiplatelet medication, his symptoms had progressively worsened, necessitating an advanced intervention.
The second case featured a 55-year-old man with known PVD in the left lower limb who had undergone a below-knee recanalization one year earlier but returned with severe claudication pain lasting two months. Both patients were carefully evaluated and deemed suitable candidates for intravascular lithotripsy (IVL), a novel technique that uses sonic pressure waves to break down calcified plaques within blood vessels, facilitating improved blood flow.
For the procedure, the Meril Mason P lithotripsy device was employed. This state-of-the-art tool delivers lithotripsy pulses via a specialized balloon catheter, helping to fracture hardened calcium within the artery walls safely and effectively. The process enhances vessel compliance and allows for better angioplasty results, decreasing the risks typically associated with calcified lesions.
Initial angiograms displayed complex arterial blockages in the affected limbs. Following IVL application—using balloon sizes 3 x 40 mm and 3.5 x 60 mm for the respective patients—final angiograms revealed significant restoration of blood flow and vessel patency. The minimally invasive nature of this intervention allowed for prompt recovery and improved limb salvage prospects.
This extraordinary achievement at KLES Dr. Prabhakar Kore Hospital underscores the institution’s commitment to adopting cutting-edge vascular therapies and improving patient outcomes in peripheral arterial disease. With India’s first below-knee lithotripsy now successfully completed, new avenues open for managing challenging calcified arterial blockages with greater precision and safety.
The collaborative efforts of the entire vascular intervention team exemplify excellence in clinical practice and innovation, reinforcing the hospital’s role as a leader in advanced interventional radiology.
This pioneering success story will inspire vascular specialists across the country to adopt IVL technology, ultimately benefiting thousands of patients suffering from peripheral vascular complications.