*ಗೋಲ್ಡನ್ ಅವರ್ ನಲ್ಲಿ ರೋಗಿಗಳನ್ನು ಸಾಗಿಸಲು ರೆಡ್ ಆಂಬುಲೆನ್ಸ್ ಜೊತೆ ಕೈಜೋಡಿಸಿದ ಕೆಎಲ್ಇ ಆಸ್ಪತ್ರೆ*

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ರೆಡ್ ಆಂಬುಲೆನ್ಸ್ ಜೊತೆಗೂಡಿ ಉತ್ತರ ಕರ್ನಾಟಕ, ದ. ಮಹಾರಾಷ್ಟ್ರ ಹಾಗೂ ಗೋವಾ ಜನರಿಗೆ ಅನುಕೂಲ ಕಲ್ಪಿಸಲು ಕಂಕಣಬದ್ದವಾಗಿದು, ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಮಹತ್ವದ ಕಾರ್ಯಕ್ಕೆ ಇಂದು ಮುನ್ನುಡಿ ಬರೆಯಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ( ಕರ್ನಲ) ಎಂ ದಯಾನಂದ ಅವರಿಂದಿಲ್ಲಿ ಹಸಿರು ನಿಶಾನೆ ತೋರುವದರ ಮೂಲಕ ಜನಸೇವೆಗೆ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ತುರ್ತು ಆರೋಗ್ಯ ಸೇವೆಯನ್ನು ಕಲ್ಪಿಸುವಲ್ಲಿ ಅಂಬ್ಯುಲನ್ಸ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕರ‍್ಯದಲ್ಲಿ ತೊಡಗಿಕೊಂಡಿದೆ. ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸಲು ಸಾಕಷ್ಟು ಯೋಜನೆ ರೂಪಿಸಿದರೂ ಕೂಡ ಕೆಲವು ತುರ್ತು ಸಂದರ್ಭಗಳಲ್ಲಿ ಅಂಬ್ಯುಲನ್ಸ ಆಸ್ಪತ್ರೆಯ ಕರ‍್ಯವನ್ನು ಮಾಡುತ್ತದೆ. ನುರಿತ ತರಬೇತಿ ಪಡೆದ ತಂಡದೊAದಿಗೆ ಅಂಬುಲನ್ಸ ಸೇವೆ ನೀಡಲು ಉತ್ಸುಕರಾಗಿದ್ದೇವೆ. ಗುಣಮಟ್ಟದ ಸೇವೆಯೊಂದಿಗೆ ಕೇವಲ ಒಂದು ಘಂಟೆ ಅವಧಿಯಲ್ಲಿ ರೋಗಿಗಳನ್ನು ಸಾಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದ ಈ ಭಾಗದ ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗಲಿದೆ ಎಂದರು.

ತುರ್ತು ಸಂದರ್ಭದಲ್ಲಿ ಅನುಕೂಲವಾಗುವ ದೃಷ್ಠಿಯಿಂದ 1099 ದೂರವಾಣಿಗೆ ಕರೆ ಮಾಡಿದರೆ ಸ್ಥಳಕ್ಕೆ ಅಂಬುಲನ್ಸ ಧಾವಿಸಲಿದೆ. ಈಗಾಗಲೇ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಸೇವೆ ಹಾಗೂ ಅಂಬುಲನ್ಸಗಳನ್ನು ಹೊಂದಿದೆ. ಅನೇಕ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳೊಂದಿಗೆ ಕರ‍್ಯಾಚರಣೆ ನಡೆಸುತ್ತಿವೆ. ಅದರ ಜೊತೆಗೆ ರೆಡ್ ಹೆಲ್ತ ಜೊತೆಗೂಡಿಇನ್ನೂ ಹೆಚ್ಚಿನ ಸೇವೆ ನೀಡಲಾಗುತ್ತದೆ ಎಂದರು.
ರೆಡ ಹೆಲ್ತನ ಉಪಾದ್ಯಕ್ಷ ಪ್ರಶಾಂತ ಅಗರವಾಲ ಅವರು ಮಾತನಾಡಿ, ಕಳೆದ 9 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಅಂಬುಲನ್ಸ ಸೇವೆ ನೀಡಲಾಗುತ್ತಿದ್ದು, ದೇಶದ 109 ಆಸ್ಪತ್ರೆಗಳೊಂದಿಗೆ ಸೇವೆ ನೀಡುತ್ತಿದ್ದು, ಒಟ್ಟು ಐದು ಸಾವಿರಕ್ಕೂ ಅಧಿಕ ಅಂಬುಲನ್ಸಗಳೊAದಿಗೆ ಕಾರ್ಯಾಚಾರಣೆ ನಡೆಸಲಾಗುತ್ತಿದೆ. ಕೆಎಲ್‌ಇ ಸಂಸ್ಥೆಯೊAದಿಗೆ ಜೊತೆಗೂಡಿ ಸೇವೆ ನೀಡುತ್ತಿರುವದು ನಮಗೆಲ್ಲ ಸಂತೋಷವನ್ನುAಟು ಮಾಡಿದೆ. ತುರ್ತು ವೈದ್ಯಕೀಯ ಸೇವೆಗಳನ್ನು ಸುಧಾರಿಸಲು ಆಸ್ಪತ್ರೆಗಳಿಗೆ ಸಹಕಾರ ನೀಡುತ್ತಿವೆ. ಈ ಅತ್ಯಾಧುನಿಕ ಆಂಬ್ಯುಲೆನ್ಸ್ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸ್ ನಿರ್ದೇಶಕರಾದ ಡಾ. ಮಾಧವ ಪ್ರಭು, ವೈದ್ಯಕೀಯ ಅಧೀಕ್ಷಕರಾದ ಡಾ. ಆರಿಫ್ ಮಾಲ್ದಾರ, ಕರ್ನಲ್ ಶ್ರೀನಿವಾಸ, ಡಾ. ಬಸವರಾಜ ಬಿಜ್ಜರಗಿ, ನವೀನ ಎನ್. ವಿನಯ ಬೆದ್ರೆ, ರೆಡ್ ಹೆಲ್ತ್ನ ಕಾಂಚನ ಕಾರ್ಕಳ, ಗೌರವ ಜೋಶಿ, ವಿನೋದ ದೇಶನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ಅಧಿಕಾರಿ ಕಾವ್ಯಾ ಪಾಟೀಲ ನಿರೂಪಿಸಿದರು.