Kannada NewsLatest

*ಕೆ ಎಲ್ ಇ ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಣೆ ವಿಭಾಗ ಹಾಗೂ ಚಿಕ್ಕಮಕ್ಕಳ ಎಂಡೋಕ್ರಿನಾಲಾಜಿ ವಿಭಾಗ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ (ಕೃತಕ ಕಾಲು) (ಪ್ರಾಸ್ತೆಟಿಕ್ಸ್ ಮತ್ತು ಆರ್ಥೋಟಿಕ್ಸ್ ವಿಭಾಗದ ವಿಸ್ತರಣೆ) ಪ್ರಯೋಗಾಲಯ ಹಾಗೂ ಚಿಕ್ಕಮಕ್ಕಳ ಎಂಡೋಕ್ರಿನಾಲಾಜಿ ವಿಭಾಗವನ್ನು ಇತ್ತೀಚೆಗೆ ಕಾಹೆರನ ಉಪಕುಲಪತಿಗಳಾದ ಪ್ರೊ. ನಿತಿನ್ ಗಂಗಾಣೆ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸಂಶೋಧನಾಧಾರಿತ ಚಟುವಟಿಕೆಗಳು ಹೆಚ್ಚಾಗಬೇಕು. ಅವಗಳ ಧನಾತ್ಮಕ ಫಲಿತಾಂಶ ಜನರ ಆರೋಗ್ಯ ಕಾಪಾಡಲು ಅನುಕೂಲವಾಗಬೇಕೆಂದು ಸಲಹೆ ನೀಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಮಾತನಾಡಿ, ವಿಭಿನ್ನ ಪ್ರಕ್ರಿಯೆಗಳನ್ನು ಮತ್ತು ಈ ವಿಭಾಗದಲ್ಲಿ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುತ್ತಾರೆ. ದಿವ್ಯಾಂಗರಿಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಅಂಗವಿಕಲರ ಸಬಲೀಕರಣಗೊಳಿಸಬೇಕು ಎಂದು ಹೇಳಿದರು.

ಚಿಕ್ಕಮಕ್ಕಳ ಎಂಡೋಕ್ರಿನಾಲಾಜಿ ವಿಭಾಗ ಸೇವೆಗೆ ಅರ್ಪಣೆ: ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಚಿಕ್ಕಮಕ್ಕಳ ಎಂಡೋಕ್ರನಾಲಾಜಿ ವಿಭಾಗವನ್ನು ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು ಜನಸೇವೆಗೆ ಅರ್ಪಿಸಿದರು. ಬೆಳವಣಿಗೆಯ ಸಮಸ್ಯೆಗಳು (ಸಣ್ಣ ನಿಲುವು) ಮಕ್ಕಳಲ್ಲಿ ಡಯಾಬಿಟಿಸ್ (ಮಧುಮೇಹ) ತೊಂದರೆ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವದು, ಥೈರಾಯಿಡ್ ಗ್ರಂಥಿ ಸಮಸ್ಯೆಗಳು, ಫ್ರೌಡಾವಸ್ಥೆಯ ತೊಂದರೆಗಳು, (ಮುಂಚೆ ಅಥವಾ ತಡವಾದ ಫ್ರೌಡಾವಸ್ಥೆ), ಹದಿಹರೆಯದ ಹುಡುಗಿಯರಲ್ಲಿ ಪಾಲಿಸಿಸ್ಟಿಕ್ ಓವಿರಿಯನ್ ಸಿಂಡ್ರೋಮ್ ಮತ್ತು ಮುಟ್ಟಿನ ಸಮಸ್ಯೆಗಳು, ಅಂತರ ಲೈಂಗಿಕ ಸಮಸ್ಯೆಗಳು, ಮಕ್ಕಳಲ್ಲಿ ಸ್ಥೂಲಕಾಯತೆ (ಬೊಜ್ಜು), ಮೂಳೆ ಮತ್ತು ಕ್ಯಾಲ್ಸಿಯಂ ತೊಂದರೆ, ಸ್ಟಿರಾಯಿಡ್ ಮತ್ತು ಅದರ ಸಂಬAಧಿತ ಅಡ್ಡಪರಿಣಾಮಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಅದಕ್ಕೆ ಅವಶ್ಯವಿರುವ ಎಲ್ಲ ರೀತಿಯ ವೈದ್ಯಕೀಯ ತಪಾಸಣೆಯನ್ನು ನೆರವೇರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಕಾಹೆರನ ಕುಲಸಚಿವರಾದ (ಡಾ) ವಿ ಎ ಕೋಠಿವಾಲೆ, ಫಿಸಿಯೋಥೆರಪಿ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ ಸಂಜೀವ್ ಕುಮಾರ್, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ವಿಭಾಗದ ಡಾ. ರಿತಿಕೇಶ್ ಪಟ್ಟನಾಯಕ್. ಡಾ ಸಿಬಾನಿ ಪ್ರಿಯದರ್ಶಿನಿ, ಡಾ ಘನಶ್ಯಾಮ್ ಪ್ರಧಾನ್, ಚಿಕ್ಕಮಕ್ಕಳ ಎಂಡೋಕ್ರನಾಲಾಜಿ ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ಮೀನಾಕ್ಷಿ ಬಿ. ಆರ್. ಡಾ. ಶ್ವೇತಾ ಪಾಶ್ಚಾಪೂರೆ, ಡಾ. ಬಸವರಾಜ ಬಿಜ್ಜರಗಿ, ಡಾ. ರಾಜಶೇಖರ ಸೋಮನಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

*ಉಚಿತ ಶಿಕ್ಷಣ, ಪ್ರತಿ ಗ್ರಾಮ ಪಂಚಾಯಿತಿಗೆ ಹೈಟೆಕ್ ಆಸ್ಪತ್ರೆ; ಹೆಚ್.ಡಿ.ಕುಮಾರಸ್ವಾಮಿ ಘೋಷಣೆ*

https://pragati.taskdun.com/belagavirayabhagakuduchijds-pancharatna-rathayatreh-d-kumaraswamy/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button