ಶನಿವಾರ ಮಹಾರಾಷ್ಟ್ರದ ಪುಣೆಯ ಭೋಸರಿಯಲ್ಲಿ ಅತ್ಯಾಧುನಿಕ ’ಕೆಎಲ್‌ಇ ಮೆಡಿಕವರ್ ಆಸ್ಪತ್ರೆ’ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ೧೦೭ ವರ್ಷಗಳ ಸುದೀಘ ಇತಿಹಾಸವನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯು ಶಿಕ್ಷಣದೊಂದಿಗೆ ಇಂದು ಆರೋಗ್ಯಕ್ಷೇತ್ರದಲ್ಲಿ ಅದ್ವೀತಿಯ ಸಾಧನೆಯನ್ನು ದಾಖಲಿಸಿದೆ. ಈಗಾಗಲೇ ತನ್ನ ಆರೋಗ್ಯ ಸೇವೆ ಹಾಗೂ ಸಂಶೋಧನೆಗಳ ಮೂಲಕ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ಸಂಸ್ಥೆಯು ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ.
ಬರುವ ಶನಿವಾರ ೨೧ ಜನೆವರಿ ೨೦೨೩ರಂದು ಮಹಾರಾಷ್ಟ್ರದ ಪುಣೆಯ ಭೋಸರಿಯಲ್ಲಿ ನೂತನ ’ಕೆಎಲ್‌ಇ ಮೆಡಿಕವರ್ ಆಸ್ಪತ್ರೆ’ ಉದ್ಘಾಟನೆಗೊಳ್ಳಲಿದ್ದು ಆ ಮೂಲಕ ರಾಜ್ಯದ ಆಚೆಗೂ ಕೆಎಲ್‌ಇ ಸಂಸ್ಥೆಯ ಮೊಟ್ಟಮೊದಲ ಆರೋಗ್ಯ ಸೇವೆಗಳು ತೆರೆದುಕೊಳ್ಳಲಿವೆ.
ಕೆಎಲ್‌ಇ ಮೆಡಿಕವರ್ ಆಸ್ಪತ್ರೆ:
ದೇಶದಲ್ಲಿಯೇ ಖಾಸಗಿ ವಲಯದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಈಗಾಗಲೇ ೪೫೦೦ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯ ಆರೋಗ್ಯ ಸೇವೆಗಳು ಈಗ ಪುಣೆಯ ಬೋಸರಿಯಲ್ಲಿ ನೂತನ ಆಸ್ಪತ್ರೆಗೆ ಚಾಲನೆ ನೀಡುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದೆ. ಈ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ೨೫೦ ಹಾಸಿಗೆಗಳನ್ನು ಹೊಂದಿದ್ದು, ನ್ಯೂರಾಲಜಿ, ನ್ಯೂರೋ-ಸರ್ಜರಿ, ಕಾರ್ಡಿಯಾಲಜಿ, ಯುರಾಲಜಿ ಮುಂತಾದ ಸೂಪರ್-ಸ್ಪೆ?ಲಿಟಿ ವಿಭಾಗಳೊಂದಿಗೆ, ಅಖಿ-ಒಖI ಸೇರಿದಂತೆ ತೀವ್ರ ನಿಗಾ ಘಟಕಗಳು, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ.
ಕೆಎಲ್‌ಇ ಸಂಸ್ಥೆಯು ಬಹು-ರಾಷ್ಟ್ರೀಯ ಸಂಸ್ಥೆಯಾದ ಮೆಡಿಕವರ್ ಗ್ರೂಪ್ ಆಫ್ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೆಡಿಕವರ್ ಗ್ರೂಪ್ ಮುಖ್ಯವಾಗಿ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭಾರತದಾದ್ಯಂತ ೨೭ ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಹೊಂದಿದೆ.
ಉದ್ಘಾಟನೆ:
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಜರುಗಲಿರುವ, ಮಲ್ಟಿಸ್ಪೆಷಾಲಿಟಿ ’ಕೆಎಲ್‌ಇ ಮೆಡಿಕವರ್ ಆಸ್ಪತ್ರೆ’ಯನ್ನು ರಾಷ್ಟ್ರ ರಾಜಕಾರಣದ ಧೀಮಂತ ನಾಯಕ ಪದ್ಮವಿಭೂಷಣ ಶ್ರೀ ಶರದರಾವಜಿ ಪವಾರ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರ್ಕಾರದ ಸನ್ಮಾನ್ಯ ಉನ್ನತ ಮತ್ತು ತಾಂತ್ರಿಕ ಶಿPಣ ಸಚಿವರಾದ ಶ್ರೀ ಚಂದ್ರಕಾಂತ ದಾದಾ ಪಾಟೀಲ ಅವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯPತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತೇಶ ಕೌಜಲಗಿ ಅವರು ವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಶಿರೂರ ಲೋಕಸಭಾ ಸದಸ್ಯರಾದ ಡಾ.ಅಮೋಲ ಕೋಲ್ಹೆ, ಮಾವಲ ಲೋಕಸಭಾ ಸದಸ್ಯರಾದ ಶ್ರೀ ಶ್ರೀರಂಗ ಬರಣೆ, ಭೋಸರಿಯ ಶಾಸಕರಾದ ಶ್ರೀ ಮಹೇಶ ಲಾಂಡಗೆ, ಅಹಮದನಗರ ಲೋಕಸಭಾ ಸದಸ್ಯರಾದ ಡಾ.ಸುಜಯ ರಾಧಾಕೃಷ್ಣ ವಿಖೆಪಾಟೀಲ, ಮೆಡಿಕವರ್ ಗ್ರುಪನ್ ಚೇರಮನ್‌ರಾದ ಶ್ರೀ ಫ್ರೆಡ್ರಿಕ್ ಸ್ಟೆನಮೋ, ಭಾರತದ ಮೆಡಿಕವರ್ ಆಸ್ಪತ್ರೆಗಳ ಚೇರಮನ್‌ರಾದ ಶ್ರೀ ಅನೀಲ ಕೃಷ್ಣಾ, ಪುಣೆಯ ಭಾರತೀಯ ವಿದ್ಯಾಪೀಠದ ಉಪಕುಲಪತಿಗಳಾದ ಡಾ.ವಿಶ್ವಜೀತ ಕದಮ ಆಗಮಿಸಲಿದ್ದು,
ವಿಶೇಷ ಆಮಂತ್ರಿತರಾಗಿ ಭಾರತದ ಮೆಡಿಕವರ್ ಆಸ್ಪತ್ರೆಗಳ ಕಾರ್ಯಕಾರಿ ನಿರ್ದೇಶಕರಾದ ಶ್ರೀ ಪಿ. ಹರಿ ಕೃಷ್ಣ, ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ಗಳಾದ ಶ್ರೀ ವಿಲಾಸ ಮಡಿಗೇರಿ, ಶ್ರೀಮತಿ ನಮ್ರತಾ ಲೋಂಧೆ ಮತ್ತು ಶ್ರೀ ವಿಕ್ರಾಂತ ಲಾಂಡೆ ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
*ಜನರ ಸಾಮಾಜಿಕ, ಆರ್ಥಿಕ ಬದಲಾವಣೆಗೆ ಸರ್ಕಾರಿ ಯೋಜನೆಗಳ ಪರಿಣಾಮದ ಬಗ್ಗೆ ಸಮೀಕ್ಷೆ ಅಗತ್ಯ: ಸಿಎಂ ಬೊಮ್ಮಾಯಿ*
https://pragati.taskdun.com/cm-basavaraj-bommaiv-k-r-v-rao-hostaleinauguration/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ