*ರನ್ನರ್-ಅಪ್ ಸ್ಥಾನ ಪಡೆದ ಕೆಎಲ್ಜಿಐಟಿ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೊಗಟೆ ತಾಂತ್ರಿಕ ಸಂಸ್ಥೆಯ (ಜಿಐಟಿ) ತಂಡವು ಐಇಇಇ ಬೆಂಗಳೂರು ವಿಭಾಗದ ಆಶ್ರಯದಲ್ಲಿ ಮತ್ತು ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಆಯೋಜಿಸಲಾದ ಅನ್ವೇಷಣ-2025 ರಾಜ್ಯಮಟ್ಟದ ಬಹು-ವಿಭಾಗ ಹ್ಯಾಕಥಾನ್ನಲ್ಲಿ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿದೆ.
ಈ ಸ್ಪರ್ಧೆಯಲ್ಲಿ 180ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ 40 ತಂಡಗಳು ಆಯ್ಕೆಯಾದವು. ಅಂತಿಮವಾಗಿ ಜಿಐಟಿ ತಂಡ ರನ್ನರ್ಸ್ ಅಪ್ ಪಡೆಯುವಲ್ಲಿ ಯಶಸ್ವಿಯಾಯಿತು. ತಂಡದ ಸದಸ್ಯರು : ಅಥರ್ವ ನಾಯ್ಕ್, ಸಾಹಿಲ್ ಪಾಟೀಲ, ನಿಖಿಲ್ ಮಜುಕರ ಮತ್ತು ಅಥರ್ವ ಕುಲಕರ್ಣಿ.
ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಮಾರ್ಗದರ್ಶನ ನೀಡಿದ ಡಾ. ಕುಲದೀಪ್ ಸಂಬ್ರೇಕರ್ (ವಿಭಾಗಾಧ್ಯಕ್ಷ, CSE-AI&ML), ಪ್ರಾಚಾರ್ಯ ಡಾ. ಎಂ. ಎಸ್. ಪಾಟೀಲ, ಪ್ರೊ. ಅಭಿಷೇಕ್ ದೇಶಮುಖ್ (IEEE ಶಾಖಾ ಸಲಹೆಗಾರ), ಡಾ. ಸಂಜೀವ ಎಸ್. ಸನ್ನಕಿ (ವಿಭಾಗಾಧ್ಯಕ್ಷ, CSE), ಪ್ರೊ. ರಾಕೇಶ್ ಜೆ. ಕಡಕೋಲ್ (ವಿಭಾಗಾಧ್ಯಕ್ಷ, ISE) ಮತ್ತು ಜಿಐಟಿ ಸಂಸ್ಥೆಗೆ ಸಹಾಯಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.



