KLS GIT ನಲ್ಲಿ ‘ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್’ ಕುರಿತು 6 ದಿನಗಳ ATAL FDP ಸಂಪನ್ನ

KLS GIT ನಲ್ಲಿ ‘ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್’ ಕುರಿತು 6 ದಿನಗಳ ATAL FDP ಸಂಪನ್ನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (KLS GIT) ಎಂಸಿಎ (MCA) ವಿಭಾಗವು AICTE ಅಟಲ್ (ATAL) ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ “Advanced Manufacturing Systems & Industry 4.0 Technologies” ವಿಷಯದ ಕುರಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (FDP) ಶನಿವಾರದಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಸೆಪ್ಟೆಂಬರ್ 7 ರಿಂದ 12 ರವರೆಗೆ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಮೆಕ್ಯಾನಿಕಲ್, ಸಿಎಸ್, ಎಐ-ಡಿಎಸ್, ಇಸಿ ಸೇರಿದಂತೆ ಹಲವು ವಿಭಾಗಗಳ 35ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಸಂಶೋಧಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಮುಖಾಂಶಗಳು:
- ವಿಷಯ ಆಧಾರಿತ ತರಬೇತಿ: ಕಾರ್ಯಕ್ರಮದಲ್ಲಿ ಇಂಡಸ್ಟ್ರಿ 4.0, ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್ (IIoT), ಕೃತಕ ಬುದ್ಧಿಮತ್ತೆ (AI), ಸೈಬರ್-ಫಿಸಿಕಲ್ ಸಿಸ್ಟಮ್ಸ್, ರೋಬೋಟಿಕ್ಸ್ ಮತ್ತು ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಕುರಿತು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಯಿತು.
- ಕೈಗಾರಿಕಾ ಭೇಟಿ: ಭಾಗವಹಿಸಿದವರಿಗೆ ಹಟ್ಟರ್ಗಿಯ ‘Aequs SEZ’ ಗೆ ಕೈಗಾರಿಕಾ ಭೇಟಿ (Industrial Visit) ಏರ್ಪಡಿಸಲಾಗಿತ್ತು.
- ಸಂಪನ್ಮೂಲ ವ್ಯಕ್ತಿಗಳು: ಮಹೀಂದ್ರಾ ಗ್ರೂಪ್, ನಗಾರೊ, ಕ್ಯಾಪ್‌ಜೆಮಿನಿ, ವಿವಾನುಜ್ ಹಾಗೂ ವಿವಿಧ ಶೈಕ್ಷಣಿಕ ಕ್ಷೇತ್ರದ ತಜ್ಞರು ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಎಂಸಿಎ ವಿಭಾಗದ ಪ್ರಾಧ್ಯಾಪಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ. ಸ್ವೇತಾ ಇಂದುದರ್ ಗೌಡರ್ ವರದಿ ವಾಚಿಸಿ, ಸ್ವಾಗತಿಸಿದರು. ಎಂಸಿಎ ವಿಭಾಗದ ಮುಖ್ಯಸ್ಥೆ ಡಾ. ಜಯಶ್ರೀ ಮಡಲಗಿ ಮಾತನಾಡಿ, “ಇಂತಹ ತರಬೇತಿಗಳು ಶೈಕ್ಷಣಿಕ ಪಠ್ಯಕ್ರಮ ಮತ್ತು ಕೈಗಾರಿಕಾ ರಂಗದ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿ” ಎಂದರು.
ಆಡಳಿತ ವಿಭಾಗದ ಡೀನ್ ಪ್ರೊ. ಡಿ. ಎ. ಕುಲಕರ್ಣಿ ಅಧ್ಯಕ್ಷೀಯ ಭಾಷಣ ಮಾಡಿ, ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ ಎಂಸಿಎ ತಂಡವನ್ನು ಅಭಿನಂದಿಸಿದರು. ಸಹ-ಸಂಯೋಜಕ ಶ್ರೀ ಸಚಿನ್ ದೇಶಾಯಿ ವಂದಿಸಿದರು. KLS ನಿರ್ವಹಣಾ ಮಂಡಳಿ ಹಾಗೂ ಸಂಸ್ಥೆಯ ಪ್ರಾಂಶುಪಾಲರು ಕಾರ್ಯಕ್ರಮದ ಯಶಸ್ಸಿಗೆ ಸಾಥ್ ನೀಡಿದರು.

