Kannada News

ವಿಟಿಯು ಬೆಳಗಾವಿ ವಲಯ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಕೆಎಲ್‌ಎಸ್ ಜಿಐಟಿ ಚಾಂಪಿಯನ್ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನವೆಂಬರ್ 4 ರಿಂದ 5 ರವರೆಗೆ ಬೆಳಗಾವಿಯ ಕೆಎಲ್ಇಯ ಡಾ. ಎಂ.ಎಸ್. ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಜರುಗಿದ ವಿಟಿಯು ಬೆಳಗಾವಿ ವಲಯ ಮಹಿಳೆಯರ ಷಟಲ್ ಬ್ಯಾಡ್ಮಿಂಟನ್ ಭಾಗದಲ್ಲಿ, ಕೆಎಲ್‌ಎಸ್ ಜಿಐಟಿ ಮಹಿಳಾತಂಡ, 2022 ರ ಟ್ರೋಫಿ ಗೆದ್ದಿದೆ.

ಈ ಮಹಿಳಾ ತಂಡ ವಿಎಸ್ಎಂಎಸ್ ಆರ್ ಕೆಐಟಿ, ನಿಪ್ಪಾಣಿ, ಮತ್ತು ಟಿಸಿಇ, ಗದಗ ತಂಡವನ್ನು ಸೋಲಿಸಿ, ಫೈನಲ್‌ನಲ್ಲಿ ಬೆಳಗಾವಿಯ ಕೆಎಲ್ಇಯ ಡಾ. ಎಂ.ಎಸ್. ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

 ನವೆಂಬರ್ 3 ರಿಂದ 4 ರವರೆಗೆ ಆಯೋಜಿಸಿದ್ದ ವಿಟಿಯು ಬೆಳಗಾವಿ ವಿಭಾಗದ ಅಂತರ್ ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಜಿಐಟಿ ಪುರುಷರ ತಂಡವು 3-1 ಸೆಟ್‌ಗಳಿಂದ ಕೆಎಲ್ಇಯ ಡಾ. ಎಂ.ಎಸ್. ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಬೆಳಗಾವಿಯನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಗೆದ್ದಿತು. ಮಹಿಳೆಯರ ವಿಭಾಗದಲ್ಲಿ ಹುಬ್ಬಳ್ಳಿಯ ಕೆಎಲ್‌ಇ ಐಟಿ ತಂಡ, ನಿಪ್ಪಾಣಿ ವಿಎಸ್‌ಎಂಎಸ್ ಆರ್ ಕೆ ಐಟಿ ತಂಡವನ್ನು 3-0 ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು.

ಕೆಎಲ್ಎಸ್ ಜಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಪ್ರಾಚಾರ್ಯ ಡಾ. ಜಯಂತ ಕಿತ್ತೂರು,  ಜಿಮಖಾನಾ ಅಧ್ಯಕ್ಷ, ಡಾ. ರಮೇಶ ಮೇದಾರ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪಿ.ವಿ. ಕಡಗದಕೈ, ದೈಹಿಕ ಶಿಕ್ಷಣ ನಿರ್ದೇಶಕಿ ಕ್ರಾಂತಿ ಕುರಂಕರ್, ಸಿಬ್ಬಂದಿ ಮತ್ತು ಕೆಎಲ್‌ಎಸ್ ಜಿಐಟಿ ಸಿಬ್ಬಂದಿ ಬಹುಮಾನ ವಿಜೇತರನ್ನು ಅಭಿನಂದಿಸಿದರು.

ಮುರುಘಾಶ್ರೀ ಇಷ್ಟು ಕೆಳಮಟ್ಟಕ್ಕೆ ಇಳಿತಾರೆ ಅಂದುಕೊಂಡಿರಲಿಲ್ಲ, ತಕ್ಕ ಶಿಕ್ಷೆಯಾಗಬೇಕು ಎಂದ ಮಾಜಿ ಸಿಎಂ ಯದಿಯೂರಪ್ಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button