
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಎಸ್ ಆಡಳಿತ ಮಂಡಳಿಯ ಸದಸ್ಯರು ಮತ್ತು ವೇಗಾ ಏವಿಯೇಷನ್ ಪ್ರೈವೇಟ್‌ನ ಸಂಚಾಲಕರ ಉಪಸ್ಥಿತಿಯಲ್ಲಿ, ಕೆಎಲ್‌ಎಸ್ ಜಿಐಟಿ ಮತ್ತು ವೇಗಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ, ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ವೆಗಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಫೈಬರ್ ಬಲವರ್ಧಿತ ಪ್ಲಾಸ್ಟಿಕ್ ಮತ್ತು ಹೈಟೆಕ್ ಸಂಯೋಜಿತ ಉತ್ಪನ್ನಗಳನ್ನು ತಯಾರಿಸುತ್ತದೆ. ಹಾಗೂ ಭಾರತೀಯ ರಕ್ಷಣಾ ಇಲಾಖೆ, ರೈಲ್ವೇ, ವಾಯುಯಾನ ಉದ್ಯಮ, ಆಟೋಮೊಬೈಲ್ಸ್ ಮತ್ತು ಇತರರು ಇವರ ಪ್ರಮುಖ ಗ್ರಾಹಕರಾಗಿದ್ದಾರೆ.
ಈ ತಿಳಿವಳಿಕೆ ಒಪ್ಪಂದವು ಕೆಎಲ್‌ಎಸ್ ಜಿಐಟಿ ಮತ್ತು ವೆಗಾ ಏವಿಯೇಷನ್ ನಡುವಿನ, ಪರಿಣತಿ, ಸಂಪನ್ಮೂಲಗಳು ಮತ್ತು ವಾಯುಯಾನ ತಂತ್ರಜ್ಞಾನವನ್ನು ವಿನಿಮಯ ಮಾಡಲು ಸಹಾಯದ ಜೊತೆಗೆ ಎರಡೂ ಸಂಸ್ಥೆಗಳು ಒಟ್ಟಾಗಿ ಸಂಶೋಧನಾ ಸಹಯೋಗಗಳನ್ನು ಪ್ರೋತ್ಸಾಹಿಸುತ್ತವೆ ಮತ್ತು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಇಂಜಿನಿಯರಿಂಗ್ ಪ್ರಾಜೆಕ್ಟ್ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಲು ಅಮೂಲ್ಯವಾದ ಅವಕಾಶಗಳನ್ನು ಒದಗಿಸುತ್ತವೆ. ಈ ಪ್ರಯತ್ನವು ಪ್ರಯೋಗಾಲಯದಲ್ಲಿ ಸಂಯೋಜಿತ ವಸ್ತುಗಳನ್ನು ಪರೀಕ್ಷಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರಾದ ಪ್ರೊ ಡಿ ಎ ಕುಲಕರ್ಣಿ, ಕೆಎಲ್‌ಎಸ್ ಮ್ಯಾನೇಜ್‌ಮೆಂಟ್ ಸದಸ್ಯರು ಈ ನೂತನ ಒಡಂಬಡಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಸುಹಾಸ್ ಪಿ ಚಿಂಡಕ್, ನಿರ್ದೇಶಕರು; ದೇವನಾಥ್ ಆರ್ ಮಿರಾಜ್ಕರ್, ಇಂಜಿನಿಯರ್; ಶ್ರೀರಾಮ ಭಂಡಾರೆ, ರಾಜೇಂದ್ರ ಬೆಳಗಾಂವಕರ್, ಪ್ರೊ. ಡಿ ಎ ಕುಲಕರ್ಣಿ ಮತ್ತು ಪ್ರಾಧ್ಯಾಪಕ್ ವರ್ಗ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕುವ ಸಂಧರ್ಭದಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ