*ಕೆಎಲ್ಎಸ್ ಜಿಐಟಿ ಯಲ್ಲಿ ಎನ್ವಿಡಿಯಾ ವಿಷುಯಲ್ ಕಂಪ್ಯೂಟಿಂಗ್ ಲ್ಯಾಬ್ ಸ್ಥಾಪನೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂ ಟ್ ಆಫ್ ಟೆಕ್ನಾಲಜಿ ಬೆಳಗಾವಿ ಎನ್ವಿಡಿಯಾ ಕಾರ್ಪೊರೇಷನ್ ಸಹಯೋಗದೊಂದಿಗೆ, ವಿದ್ಯಾರ್ಥಿಗಳು ಮತ್ತು ಡೆವಲಪರ್ ಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್ ಲರ್ನಿಂಗ್ ತಂತ್ರಜ್ಞಾನಗಳನ್ನು ಕಲಿಯಲು ಎನ್ವಿಡಿಯಾ ಜೆಟ್ ಸನ್ ಎಂಬೆಡೆಡ್ ಲ್ಯಾಬ್ ನ್ನು ಪ್ರಾರಂಭಿಸಿದೆ.
ಈ ಕುರಿತು ಕೇಂದ್ರದ ಸಂಯೋಜಕರಾದ ಡಾ.ಉತ್ತಮ್ ದೇಶಪಾಂಡೆ ಮಾತನಾಡಿ, ಈ ಲ್ಯಾಬ್ ನ್ನು ಎನ್ವಿಡಿಯಾ ಸೆಂಟರ್ ಫಾರ್ ವಿಷುಯಲ್ ಕಂಪ್ಯೂಟಿಂಗ್ ಎಂದು ಹೆಸರಿಸಲಾಗಿದೆ ಮತ್ತು ಲ್ಯಾಬ್ ನಲ್ಲಿ ಎನ್ವಿಡಿಯಾ ನ ಜೆಟ್ಸನ್ ಸರಣಿಯ ಎಐ ಆಧಾರಿತ ಅಭಿವೃದ್ಧಿ ಕಿಟ್ ಗಳು, ರೋಬೋಟಿಕ್ ಕಿಟ್ ಗಳು, ಆರ್ಟಿಎಕ್ಷ ಸರ್ವರ್ ಮತ್ತು ವರ್ಕ್ ಸ್ಟೇಷನ್ ಅನ್ನು ಸ್ಥಾಪಿಸಲಿದೆ ಎಂದು ವಿವರಿಸಿದರು.
ಪ್ರಸ್ತುತ ಭಾರತದಾದ್ಯಂತ ಕೆಲವೇ ಕೆಲವು ಐಐಟಿ ಮತ್ತು ಎನ್ ಐಟಿ ಅಂತಹ ಪ್ರೀಮಿಯರ್ ಸಂಸ್ಥೆಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿದೆ ಎಂದು ತಿಳಿಸಿದರು.
ಈ ಸೌಲಭ್ಯವು ನೈಜ-ಸಮಯದ ಎಐ ಸಂಸ್ಕರಣೆ ಮತ್ತು ಎಡ್ಜ್ ಕಂಪ್ಯೂಟಿಂಗ್ ನಂತಹ ನವೀನ ತಂತ್ರಜ್ಞಾನದ ಮಾಹಿತಿ ಸಂಸ್ಕರಣೆ ನೀಡಲಿದೆ. ಇದು ಉತ್ಪಾದನಾ ಕೈಗಾರಿಕೆಗಳು, ಸ್ವಾಯತ್ತ ವಾಹನಗಳು, ಸ್ಮಾರ್ಟ್ ಸಿಟಿ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಪ್ಲಿಕೇಷನ್ ಗಳನ್ನು ಅಭಿವೃದ್ಧಿಪಡಿಸಲು ಸಹಾಯಕವಾಗಲಿದೆ. ಕೈಗಾರಿಕೆಗಳಲ್ಲಿ ಅತ್ಯುತ್ತಮ ಪರಿಹಾರಗಳನ್ನು ಒದಗಿಸಿ ಅತ್ಯಾಧುನಿಕ ಎಡ್ಜ್ ಎಐ ತಂತ್ರಜ್ಞಾನಗಳಲ್ಲಿ ಕೆಲಸ ಮಾಡಲು ಯುವ ಇಂಜಿನಿಯರ್ ಗಳಿಗೆ ಈ ಸಹಯೋಗವು ಅವಕಾಶಗಳನ್ನು ಒದಗಿಸುತ್ತದೆ.
ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥೆ ಡಾ.ಸುಪ್ರಿಯಾ ಶಾನಭಾಗ, ಪ್ರಾಂಶುಪಾಲರಾದ ಪ್ರೊ.ಡಿ.ಎ.ಕುಲಕರ್ಣಿ, ಕೆ ಎಲ್ ಎಸ್ ಜಿಐಟಿಯ ಗರರ್ನಿಂಗ್ ಕೌನ್ಸಿಲ್ ಚೇರಮನ್ ರಾಜೇಂದ್ರ ಬೆಳಗಾಂವ್ಕರ್, ಜಿಐಟಿ ಕ್ಯಾಂಪಸ್ ಗೆ ಈ ಸೌಲಭ್ಯವನ್ನು ತರಲು ಇ ಮತ್ತು ಸಿ ತಂಡವು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ