ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬೆಂಬಲಿಸಲು ಪಠ್ಯಕ್ರಮವನ್ನು ನಿರ್ಮಿಸುವ ಉಪಕ್ರಮವಾಗಿ ಸೆಪ್ಟೆಂಬರ್ 7ರಂದು“ತಂತ್ರಜ್ಞ – ಎ ಟೆಕ್ನೋವೇಶನ್ಪ್ರಾಜೆಕ್ಟ್ ಎಕ್ಸ್‌ಪೋ ಅನ್ನು ಆಯೋಜಿಸುತ್ತಿದೆ.
ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಹಾಗೂ ಉದ್ಯಮದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಈ ಮೆಗಾ ಪ್ರಾಜೆಕ್ಟ್ ನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿಭಾಗದ 95 ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗುತ್ತದೆ.
ಈಪ್ರಾಜೆಕ್ಟ್ ಮಾದರಿಗಳು ಇಕೋವರ್ಲ್ಡ್, ರೊಬೊಟಿಕ್ಸ್, ಇಂಡಸ್ಟ್ರಿಯಲ್ ಅಪ್ಲಿಕೇಶನ್ ಮತ್ತು ಮಾಲಿನ್ಯ ನಿರ್ವಹಣೆಯನ್ನು ಆಧರಿಸಿವೆ. ವಿವಿಧ ಪಿಯುಸಿ, ಡಿಪ್ಲೊಮಾ ಮತ್ತು ಪ್ರೌಢಶಾಲಾ ಹಂತದ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಹಾಗೂ ಈ ಕಾರ್ಯಕ್ರಮಕ್ಕೆ ಬೆಳಗಾವಿ ಪ್ರದೇಶದ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ, ಡಾ.ಪ್ರವೀಣ್ಪಿ.ಬಾಗೇವಾಡಿ, ಐಎಎಸ್ ಅಧಿಕಾರಿಗಳು, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆಎಲ್ ಎಸ್ ಜಿ ಐಟಿ, ಬೆಳಗಾವಿ, ಆಡಳಿತ ಮಂಡಳಿ, ಅಧ್ಯಕ್ಷರು, ಶ್ರೀರಾಜೇಂದ್ರ ಬೆಳಗಾಂವಕರ್, ಇವರು ಈ ಕಾರ್ಯಕ್ರಮಕ್ಕೆ ಅಧ್ಯಕ್ಷ ಸ್ಥಾನ ತುಂಬಲಿದ್ದಾರೆ.
ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೆಎಲ್‌ಎಸ್ ಜಿ ಐಟಿಯ ಪ್ರಾಂಶುಪಾಲರಾದ ಡಾ.ಜಯಂತ್ ಕೆ.ಕಿತ್ತೂರು ಕರೆ ನೀಡಿರುತ್ತಾರೆ.
ನಿವೃತ್ತಿ ಹೊಂದುವ ಶಿಕ್ಷಕರ ಪ್ರಮಾಣದಷ್ಟೇ ಹೊಸ ಶಿಕ್ಷಕರ ನೇಮಕಾತಿಗೆ ವ್ಯವಸ್ಥೆ: ಸಿಎಂ ಬೊಮ್ಮಾಯಿ ಭರವಸೆ
https://pragati.taskdun.com/latest/radhakrishnan-birthday-celebrationteachers-daycm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ