*ಕೆಎಲ್ಎಸ್ ಜಿಐಟಿಯಲ್ಲಿ ಅತ್ತ್ಯುತ್ತಮವಾಗಿ ಜರುಗಿದ ಪಿಜಿಸಿಇಟಿ ಕ್ರ್ಯಾಶ್ ಕೋರ್ಸ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆ ಎಲ್ ಎಸ್ ಜಿಐಟಿ ಎಂಬಿಎ ವಿಭಾಗದವತಿಯಿಂದ ಆಗಸ್ಟ್ 22, 23 ಹಾಗೂ 24ರಂದು ನಡೆಸಿದ ಉಚಿತ ಪಿಜಿಸಿಇಟಿ ಕ್ರ್ಯಾಶ್ ಕೋರ್ಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಮಾರೋಪ ಸಮಾರಂಭದಲ್ಲಿ ಎಂಬಿಎ ವಿಭಾಗದ ಡೀನ್ ಹಾಗೂ ಜಿಐಟಿ ಪ್ರಾಂಶುಪಲ ಪ್ರೊ.ಡಿ.ಎ.ಕುಲಕರ್ಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮ್ಯಾನೇಜ್ಮೆಟ್ ಕೋರ್ಸ್ ಗಳು ಭವಿಷ್ಯ ನಿರ್ಮಾಣಕ್ಕೆ ಉತ್ತಮ ಮ್ಯಾನೇಜರ್ ಗಳನ್ನು ನೀಡಲಿದೆ. ಈ ಕ್ರ್ಯಾಶ್ ಕೋರ್ಸ್, ಪರೀಕ್ಷಾ ಸಿದ್ಧತೆಯನ್ನು ಉತ್ತಮಪಡಿಸಲು ವೇದಿಕೆಯಾಗಿದೆ ಎಂದು ತಿಳಿಸಿದರು. ಇದೇ ವೇಳೆ ಕ್ರ್ಯಾಶ್ ಕೋರ್ಸ್ ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಡಾ.ರಾಜೇಂದ್ರ ಎಂ.ಇನಾಮದಾರ, ಮೂರು ದಿನಗಳ ಅವಧಿಯ ಅವಲೋಕನವನ್ನು ನೀಡಿದರು ಹಾಗು ಮ್ಯಾನೇಜ್ಮೆಂಟ್ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಆ.24ರಂದು ಪ್ರೊ.ರೇಖಾ ಬಿರ್ಜೆ ಅಣುಕು ಪರೀಕ್ಷೆಗಳನ್ನು ನಡೆಸಿದರು. ಇದರಿಂದ ವಿದ್ಯಾರ್ಥಿಗಳು ಮುಂಬರುವ ಪಿಜಿಸಿಇಟಿ ಪರೀಕ್ಷೆಗೆ ಹಾಜರಾಗಲು ತಮ್ಮ ತಯಾರಿ ಉತ್ತಮ ಪಡಿಸಲು ಸಹಾಯವಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 155 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋರ್ಸ್ ಗೆ ನೋಂದಾಯಿಸಿಕೊಳ್ಳುವುದರ ಜೊತೆಗೆ ಅಗಾಧ ಪ್ರತಿಕ್ರಿಯೆ ಪಡೆಯಿತು. ರೀಸನಿಂಗ್, ನ್ಯೂಮರಿಕಲ್ ಆಪ್ಟಿಟ್ಯೂಡ್, ಸಾಮಾನ್ಯ ಜ್ಞಾನ, ಡೇಟಾ ಇಂಟರ್ ಪ್ರಿಟೇಶನ್ ಮತ್ತು ಇಂಗ್ಲೀಷ್ ಮತ್ತು ಕಾಂಪ್ರೆಹೆನ್ಷನ್ ಸ್ಕಿಲ್ ಕಲಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ