ಐಎಂಇಆರ್ ಗೆ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪಿನಾಕಲ್ ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕೆಎಲ್‌ಎಸ್ ಐಎಂಆರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ೨೦೧೮-೧೯ನೇ ಸಾಲಿನ ಟೋಸ್ಟ್ ಮಾಸ್ಟರ್ಸ್ ಡಿಸ್ಟ್ರಿಕ್ಟ್ ೯೨ ರಲ್ಲಿ ಪ್ರತಿಷ್ಠಿತ ಪಿನಾಕಲ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜೂನ್ ೩೦ ರ ಮೊದಲು ಕ್ಲಬ್ ಡಿಸ್ಟಿಂಗ್ವಿಶ್ಡ್ ಸ್ಥಾನಮಾನವನ್ನು ಸಾಧಿಸಿದಾಗ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಯಾವುದೇ ಯಶಸ್ವಿ ಉದ್ಯಮವನ್ನು ಸಾಧಿಸಲು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಶ್ಯಕತೆಯಾಗಿರುವ ಸಂವಹನ ಕೌಶಲ್ಯಗಳು, ಸಾರ್ವಜನಿಕ ಭಾಷಣ ಮತ್ತು ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಟೋಸ್ಟ್ ಮಾಸ್ಟರ್ಸ್ ಆಂದೋಲನವನ್ನು ಕೆಎಲ್‌ಎಸ್ ಐಎಂಇಆರ್ ನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.
ಟೋಸ್ಟ್ ಮಾಸ್ಟರ್ಸ್ ಕ್ಲಬ್ ಎನ್ನುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮತ್ತು ಸ್ವಯಂ ಚಾಲಿತ, ಶೈಕ್ಷಣಿಕ ಸಂಸ್ಥೆಯಾಗಿದ್ದು, ಇದು ವಿನೋದ ಮತ್ತು ಸ್ನೇಹದಿಂದ ಸಕಾರಾತ್ಮಕ ಮತ್ತು ಬೆಂಬಲ ಕಲಿಕೆಯನ್ನು ನೀಡುವ ಮೂಲಕ ಹೆಚ್ಚಿನ ಆತ್ಮ ವಿಶ್ವಾಸ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಶಕ್ತಗೊಳಿಸುತ್ತದೆ.
ಕೆಎಲ್‌ಎಸ್ ಐಎಂಇಆರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪ್ರತಿ ಸೋಮವಾರ ಸಂಜೆ ೫.೩೦ ರಿಂದ ಸಂಜೆ ೬.೩೦ ರ ನಡುವೆ ನಿಯಮಿತವಾಗಿ ಸಭೆ ಸೇರುತ್ತದೆ.
ಮಾತನಾಡುವ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಬಯಸುವವರಿಗೆ ಸದಸ್ಯತ್ವವು ಮುಕ್ತವಾಗಿರುತ್ತದೆ. ಸಂಪರ್ಕ ಸಂಖ್ಯೆ ೯೮೪೪೦೮೬೬೯೫
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ